ಕಮರಿಗೆ ಉರುಳಿದ ಬಸ್‌: 14 ಮಂದಿ ಸಾವು
ನವದೆಹಲಿ:ಮದುವೆ ಸಮಾರಂಭ ಮುಗಿಸಿ ತೆರಳುತ್ತಿದ್ದ ಬಸ್‌ವೊಂದು ಚಂಪಾವತ್ ಜಿಲ್ಲೆಯ ಬುದಮ್ ಗ್ರಾಮದ ಸುಖೀದಂಗ್ ರೀತಾ ಸಾಹಿಬ್ ರಸ್ತೆಯಲ್ಲಿ ಕಮರಿಗೆ ಉರುಳಿದ ದುರ್ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
‘ಮದುವೆ ಮುಗಿಸಿಕೊಂಡು ತೆರಳುತ್ತಿದ್ದ ಬಸ್‌ ಇಂದು ಮುಂಜಾನೆ ಅಪಘಾತಕ್ಕೀಡಾಗಿದೆ. ಈ ವೇಳೆ 14 ಮಂದಿ ಮೃತಪಟ್ಟಿದ್ದಾರೆ’ ಎಂದು ಕಮೌನ್ ಪ್ರಾಂತ್ಯದ ಡಿಐಜಿ ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ.