14,148 ಕೋವಿಡ್‌ ಪ್ರಕರಣ ಪತ್ತೆ, 302 ಮಂದಿ ಸಾವು
ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 14,148 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 302 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,28,81,179 ಕ್ಕೆ ಏರಿಕೆಯಾಗಿದೆ. ಆ ಪೈಕಿ 5,12,924 ಮಂದಿ ಮೃತಪಟ್ಟಿದ್ದಾರೆ. ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದುವರೆಗೆ 4,22,19,896 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 1,48,359 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಇದುವರೆಗೆ 1,76,52,31,385 ಕೋಟಿ ಡೋಸ್‌ ಕೋವಿಡ್ ಲಸಿಕೆ ಹಾಕಲಾಗಿದೆ.
ಸದ್ಯ ಕೇರಳದಲ್ಲಿ 48,152, ಮಹಾರಾಷ್ಟ್ರದಲ್ಲಿ 15,595, ತಮಿಳುನಾಡಿನಲ್ಲಿ 10,782, ಕರ್ನಾಟಕದಲ್ಲಿ 9,415, ಉತ್ತರ ಪ್ರದೇಶ 5,093, ಆಂಧ್ರ ಪ್ರದೇಶದಲ್ಲಿ 5,181 ಸಕ್ರಿಯ ಪ್ರಕರಣಗಳಿವೆ.