ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್
ಸೆನ್ಸೆಕ್ಸ್ 790.27 ಪಾಯಿಂಟ್ಸ್​ ಕುಸಿದು 54,312.41 ಪಾಯಿಂಟ್ಸ್​ ಮುಟ್ಟಿದರೆ, ನಿಫ್ಟಿ 229.80 ಪಾಯಿಂಟ್ಸ್ ರಷ್ಟು ನೆಲ ಕಚ್ಚಿ, 16,268.20 ಪಾಯಿಂಟ್ಸ್​ ಮಟ್ಟವನ್ನು ಮುಟ್ಟಿತು. 1048 ಕಂಪೆನಿಗಳ ಷೇರು ಏರಿಕೆ ದಾಖಲಿಸಿದರೆ, 1726 ಕಂಪೆನಿಗಳ ಷೇರು ಇಳಿಕೆ ಕಂಡವು. 108 ಕಂಪೆನಿಗಳ ಷೇರುಗಳ ಬೆಲೆ ಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ವಾಹನ ಸೂಚ್ಯಂಕ ಅತಿ ದೊಡ್ಡ ನಷ್ಟ ಕಂಡು, ಶೇ 2.82ರಷ್ಟು ಕುಸಿತ ಕಂಡಿತು.
ಬಿಎಸ್​ಇ ರಿಯಾಲ್ಟಿ ಶೇ 2.01, ಬಿಎಸ್​ಇ ಐಟಿ ಶೇ 1.36ರಷ್ಟು ಇಳಿಕೆ ಕಂಡಿತು. ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ 15 ಪೈಸೆ ಇಳಿಕೆ ಯೊಂದಿಗೆ 76.06ರಲ್ಲಿ ಆರಂಭಗೊಂಡಿತು.