ಮದರ್‌ ಡೈರಿ ಹಾಲಿನ ಬೆಲೆ: ಲೀಟರ್‌ ಗೆ 2 ರೂ. ಏರಿಕೆ
ನವದೆಹಲಿ:ಅಮುಲ್‌ ಹಾಗೂ ಪರಾಗ್‌ ಹಾಲಿ ಉತ್ಪನ್ನಗಳ ಸಂಸ್ಥೆ ಪ್ರತಿ ಲೀಟರ್‌ ಗೆ 2 ರೂ. ಆದ ಬೆನ್ನಲ್ಲೇಹಾಲು ಸಂಗ್ರಹಣೆ ವೆಚ್ಚದ ಏರಿಕೆಯಿಂದಾಗಿ ಮದರ್‌ ಡೈರಿ ಹಾಲಿನ ಬೆಲೆ ಕೂಡ ಲೀಟರ್‌ ಗೆ 2 ರೂ. ಏರಿಕೆ ಮಾಡಲಾಗಿದೆ.
ಈ ಹೊಸ ದರ ಕೇವಲ ದೆಹಲಿ-ಎನ್‌ ಸಿ ಆರ್‌ ವ್ಯಾಪ್ತಿಗೆ ಮಾತ್ರ ಅನ್ವಯಿಸಲಿದೆ. ನಾಳೆಯಿಂದ ಹರಿ ಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮದರ್ ಡೈರಿ ಹಾಲಿನ ಬೆಲೆ ಹೆಚ್ಚಾಗಲಿದೆ.
ಇಂದಿನಿಂದ ಮದರ್‌ ಡೈರಿಯ ಕೆನೆ ಹಾಲಿನ ದರ ಲೀಟರ್‌ ಗೆ 57ರೂ.ನಿಂದ 59 ರೂ, ಗೆ ಏರಿಕೆಯಾಗಿದೆ. ಹಸುವಿನ ಹಾಲಿನ ದರ ಲೀಟರ್‌ಗೆ 49 ರೂ.ನಿಂದ 51 ರೂ.ಗೆ ಏರಿಕೆಯಾಗಿದೆ. ಹಾಲು ಸಂಗ್ರಹಣೆ, ಇಂಧನ ವೆಚ್ಚಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಮದರ್ ಡೈರಿಯು ಹಾಲಿನ ಬೆಲೆಯನ್ನು 2 ರೂ.ಗೆ ಹೆಚ್ಚಿಸಲಾಗಿದೆ.