ಡಾ.ಪವನ್ ಮುಂಜಾಲ್‌’ರಿಂದ ಎಲೆಕ್ಟ್ರಿಕ್ ಮೊಬಿಲಿಟಿಗಾಗಿ ವಿಶ್ವಕ್ಕೆ `ವೀಡಾ’  ಹೊಸ ಬ್ರಾಂಡ್ ಪ್ರಕಟಣೆ
• 100 ಮಿಲಿಯನ್‌ ಡಾಲರ್‌ ಜಾಗತಿಕ ಸುಸ್ಥಿರತೆಯ ನಿಧಿಯಿಂದ 10,000ಕ್ಕೂ ಹೆಚ್ಚು ಉದ್ಯಮಿಗಳಿಗೆ ಇಎಸ್‌ಜಿ ಪರಿಹಾರಗಳಲ್ಲಿ ನೆರವು
ನವದೆಹಲಿ:ಮೊಬಿಲಿಟಿಗೆ ಭವಿಷ್ಯ ಸನ್ನದ್ಧವಾಗುವ ತನ್ನ ಧ್ಯೇಯವನ್ನು ಈಡೇರಿಸುವ ನಿಟ್ಟಿನಲ್ಲಿ ತನ್ನ ಸತತ ಪ್ರಯತ್ನ ದೊಂದಿಗೆ ವಿಶ್ವದ ಅತ್ಯಂತ ದೊಡ್ಡ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಉತ್ಪಾದಕ ಹೀರೊ ಮೊಟೊ ಕಾರ್ಪ್ಎಲೆಕ್ಟ್ರಿಕ್ ವಾಹನಗಳು(ಇವಿ) ಒಳಗೊಂಡು ತನ್ನ ಹೊಸ ಮೊಬಿಲಿಟಿ ಪರಿಹಾರಗಳಿಗೆ ಹೊಚ್ಚ ಹೊಸ ಗುರುತು`ವೀಡಾ’ ಅನಾವರಣ ಗೊಳಿಸಿದೆ.
ವೀಡಾ ಪರ‍್ಡ್ ಬೈ ಹೀರೊ ಪರಿಚಯಿಸಿದ ದುಬೈನ ಕ್ಲಿಯರೆನ್ಸ್ ಐಲ್ಯಾಂಡ್‌ನಲ್ಲಿ ನಡೆದ ವಿನೂತನ ಬಗೆಯಕಾರ್ಬನ್ ನ್ಯೂಟ್ರಲ್‌ ಕಾರ್ಯಕ್ರಮದಲ್ಲಿ ಹೀರೊ ಮೊಟೊಕಾರ್ಪ್ನ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್‌ ಗ್ಲೋಬಲ್ ಸಸ್ಟೇನಬಿಲಿಟಿ ಫಂಡ್‌ಗೆ 100 ಮಿಲಿಯನ್‌ ಡಾಲರ್‌ ದೇಣಿಗೆ ಪ್ರಕಟಿಸಿದರು. ಈ ನಿಧಿಯು ಬಿಎಂಎಲ್ ಮುಂಜಾಲ್‌ ಯೂನಿವರ್ಸಿಟಿ(ಬಿಎಂಯು) ಮತ್ತು ಹೀರೊಕಾರ್ಪ್ನ ಜಾಗತಿಕ ಸಹಯೋಗಗಳನ್ನು ಸಾಧಿಸುವ ಗುರಿ ಹೊಂದಿದ್ದುಇಎಸ್‌ಜಿ ಪರಿಹಾರಗಳಲ್ಲಿ 10,000 ಉದ್ಯಮಿಗಳನ್ನು ಪೋಷಿಸಲಿದ್ದು ಅದು ಭೂಗ್ರ ಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಸುಸ್ಥಿರತೆಗೆ ಆದ್ಯತೆ ನೀಡಿ ಮತ್ತು ಭವಿಷ್ಯದ ತಲೆಮಾರುಗಳಿಗೆ ಪ್ರವರ್ಧಮಾನದ, ಅರ್ಥ ಪೂರ್ಣ ವಿಶ್ವವನ್ನು ನೀಡುವಗುರಿಯೊಂದಿಗೆಡಾ. ಮುAಜಾಲ್‌ ಕಾರ್ಯಕ್ರಮದಲ್ಲಿ ಅವರ ಗುರಿಗೆ ಜೀವ ತುAಬುವ ಕ್ರಿಯಾ-ಅಂಶಗಳನ್ನು ಎತ್ತಿ ತೋರಿಸಿದರು. ಹೊಸ ಬ್ರಾಂಡ್ ಲಾಂಛನ ಅನಾವರಣಗೊಳಿಸಿದ ಮತ್ತು ವೀಡಾ, ಪರ‍್ಡ್ ಬೈ ಹೀರೊದ `ಸನ್‌ರೈಸ್’ ಗುರುತನ್ನುಅನಾವರಣ ಮಾಡಿದಡಾ.ಪವನ್ ಮುಂಜಾಲ್, “ವೀಡಾ ಎಂದರೆ ಜೀವನ ಮತ್ತು ಬ್ರಾಂಡ್‌ನ ಏಕೈಕ ಉದ್ದೇಶ ವಿಶ್ವದ ಮೇಲೆ ಸಕಾರಾತ್ಮಕ ಪರಿಣಾಮ ಸೃಷ್ಟಿಸು ವುದು ಮತ್ತು ನಮ್ಮೆಲ್ಲರನ್ನೂಅರ್ಥಪೂರ್ಣ ವಿಧಾನಗಳಲ್ಲಿ ಮುನ್ನಡೆಸುವುದು. ನಮ್ಮ ಮಕ್ಕಳಿಗೆ ಹಾಗೂ ಮುಂದಿನ ತಲೆಮಾರಿಗೆ ನಾವು ನಿರ್ಮಿಸುತ್ತಿರುವುದಕ್ಕೆ ಈ ಹೆಸರು ಪರಿಪೂರ್ಣವಾಗಿದೆಎಂದು ನಾವು ನಂಬಿದ್ದೇವೆ. ಇದು ನಿಜಕ್ಕೂಒಂದು ವಿಶೇಷದ ಸೂರ್ಯೋದಯ. ಇಂದಿನಿAದ 17 ವಾರಗಳ ನಂತರ ನಾವು ನಮ್ಮ ವೀಡಾ ಪ್ಲಾಟ್‌ಫಾರಂ, ಉತ್ಪನ್ನಗಳು ಮತ್ತು ಸೇವೆಗಳನ್ನು ಬಿಡುಗಡೆ ಮಾಡುವ ಮೂಲಕ ವಿಶ್ವವನ್ನುಉತ್ತಮತಾಣವನ್ನಾಗಿಸಲಿದ್ದೇವೆ” ಎಂದರು.
“ನಾನು ನಮ್ಮ ಭವಿಷ್ಯದ ತಲೆಮಾರುಗಳನ್ನು ಅದರಲ್ಲಿಯೂ ನನ್ನ ಮೊಮ್ಮಕ್ಕಳನ್ನು ಕಂಡಾಗ ನಾನು ಆಶಾವಾದ, ಸಕಾರಾತ್ಮಕ ಶಕ್ತಿ, ಸ್ವಚ್ಛ ಹಾಗೂ ಪ್ರತಿಯೊಬ್ಬರಿಗೂ ನಿರೀಕ್ಷೆ ಮತ್ತು ಮತ್ತಷ್ಟುದೊಡ್ಡ ಹಾಗೂ ಉತ್ತಮವಾದುದರಲ್ಲಿ ಭಾಗವಹಿಸುವ ಭವಿಷ್ಯವನ್ನು ನಿರ್ಮಿಸಲು ಬಯಸುತ್ತೇನೆ. `ವೀಡಾ’ ಸೃಷ್ಟಿಯೊಂದಿಗೆ ನಾವು ಪ್ರತಿಯೊಬ್ಬರಿಗೂಅವರು ಬಯಸಿದಂತೆ ಮುಂದುವರಿಯುವುದಲ್ಲದೆ ಬೆಳೆಯಲು, ಪ್ರಗತಿ ಸಾಧಿಸಲು ಮತ್ತುಉತ್ತಮರೀತಿಯಲ್ಲಿಜೀವಿಸಲು ಅವಕಾಶವನ್ನು ನಾವು ಕಲ್ಪಿಸುತ್ತೇವೆ. ಈ ಉಪಕ್ರಮವನ್ನು ನಾನು ನೇತೃತ್ವ ವಹಿಸಲು ಬಯಸುತ್ತೇನೆ” ಎಂದುಡಾ.ಮುAಜಾಲ್ ಹೇಳಿದರು.
ಭವಿಷ್ಯ-ಸನ್ನದ್ಧಕಾರ್ಯತಂತ್ರದಆಧಾರ ಸ್ತಂಭವಾಗಿಡಾ.ಮುAಜಾಲ್ ಹೊಸ ಬ್ರಾಂಡ್‌ಅನ್ನು ವಿಶ್ವದಾದ್ಯಂತ ಮೊಬಿಲಿಟಿ ಪರಿಹಾರಗಳನ್ನು ಮುನ್ನಡೆಸಲು ಅನಾವರಣಗೊಳಿಸಿದರು. ವೀಡಾ, ಪರ‍್ಡ್ ಬೈ ಹೀರೊ ವಿಸ್ತರಿಸುತ್ತಿರುವ ಮೊಬಿಲಿಟಿ ಪರಿಹಾರಗಳಿಗೆ ಹೀರೊ ಮೊಟೊಕಾರ್ಪ್ನ ಉಪಕ್ರಮಗಳ ಬ್ರಾಂಡ್‌ಆಗಿದ್ದುಅದರಲ್ಲಿ ಮೊದಲನೆಯದುಎಲೆಕ್ಟಿçಕ್ ವಾಹನವಾಗಿದ್ದುಅದನ್ನುಅಧಿಕೃತವಾಗಿಜುಲೈ 1, 2022ರಂದು ಅನಾವರಣ ಮಾಡಲಾಗುತ್ತದೆ, ಅದು ಹೀರೊ ಮೊಟೊಕಾರ್ಪ್ನ ದಿಗ್ಗಜಅಧ್ಯಕ್ಷಡಾ.ಬೃಜ್‌ಮೋಹನ್ ಲಾಲ್‌ಅವರಜನ್ಮ ಶತಮಾನೋತ್ಸವವೂಆಗಿದೆ.ಹೊಸ ವೀಡಾ ಮಾದರಿಯುಹೀರೊ ಮೊಟೊಕಾರ್ಪ್ನಚಿತ್ತೂರಿನ `ಗ್ರೀನ್’ ಉತ್ಪಾದನಾ ಸೌಲಭ್ಯದಲ್ಲಿಉತ್ಪಾದನೆಯಾಗಲಿದೆ. 2022ರ ನಂತರಗ್ರಾಹಕರಿಗೆ ವಿತರಣೆಯಾಗಲಿದೆ.
ವಿನೂತನ ಬಗೆಯ ಈ ಕಾರ್ಯಕ್ರಮದಲ್ಲಿಜಾಗತಿಕಚಿಂತಕರು, ಸರ್ಕಾರದ ಹಿರಿಯ ಪ್ರತಿನಿಧಿಗಳು ಮತ್ತುಯುಎಇಯರಾಜತಾಂತ್ರಿಕರು, ನೀತಿ ನಿರೂಪಕರು ಮತ್ತು ಹೀರೊ ಮೊಟೊಕಾರ್ಪ್ನ ಬೋರ್ಡ್ಆಫ್‌ಡೈರೆಕ್ರ‍್ಸ್, ವಿಶ್ವದ ಮೂಲೆಮೂಲೆಯಿಂದ ಹಿರಿಯ ಉದ್ಯೋಗಿಗಳು, ಡೀಲರ್‌ಗಳು, ಜಾಗತಿಕ ವಿತರಕರು, ಪೂರೈಕೆ ಸರಣಿ ಪಾಲುದಾರರು ಒಳಗೊಂಡು ವಿವಿಧ ಪಾಲುದಾರರು ಭಾಗವಹಿಸಿದ್ದರು.