ಪಂಚ ರಾಜ್ಯಗಳ ಚುನಾವಣೆ: ನಾಳೆ ಫಲಿತಾಂಶ ಘೋಷಣೆ
ನವದೆಹಲಿ:ದೇಶಾದ್ಯಂತ ಕುತೂಹಲ ಮೂಡಿಸಿದ್ದಂತ ಪಂಚ ರಾಜ್ಯಗಳ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಮಾ.10ರಂದು ನಾಳೆ ಫಲಿ ತಾಂಶ ಘೋಷಣೆಯಾಗಲಿದೆ.
ಉತ್ತರ ಪ್ರದೇಶದ 403, ಪಂಜಾಬ್ ನ 177, ಉತ್ತರಾಖಂಡದ 70, ಮಣಿಪುರದ 60, ಹಾಗೂ ಗೋವಾದ 40 ಸ್ಥಾನ ಸೇರಿದಂತೆ 690 ಸ್ಥಾನಗಳಿಗೆ ನಡೆದ ವಿಧಾನ ಸಭೆಯ ಚುನಾವಣೆಯ ಫಲಿತಾಶ ನಾಳೆ ಘೋಷಣೆಯಾಗಲಿದೆ.
ಮತದಾನದ ಬಳಿಕ ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗಳಲ್ಲಿ ಸುರಕ್ಷಿತ ವಾಗಿರಿಸಲಾಗಿದೆ. ಗುರುವಾರ ಮತ ಏಣಿಕೆ ಆರಂಭವಾಗಿಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಶ ಪ್ರಕಟವಾಗುವ ಸಾಧ್ಯತೆ ಇದೆ.
ಗೋವಾ, ಪಂಜಾಬ್, ಉತ್ತರಾಖಂಡಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿತ್ತು. ಮಣಿಪುರ 2 ಹಂತದಲ್ಲಿ, ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ ನಡೆದಿತ್ತು.