ಭಗವಂತ್‌ ಮಾನ್‌ ಇಂದು ದೆಹಲಿ ಭೇಟಿ: ರಾಜೀನಾಮೆ ಸಲ್ಲಿಕೆ
ಚಂಡೀಗಢ:ಪಂಜಾಬ್‌ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಎಎಪಿಯ ಮುಖ್ಯ ಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌, ಸೋಮವಾರ ದೆಹಲಿಗೆ ತೆರಳಿ ತನ್ನ ಸಂಗ್ರೂರ್‌ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಸೋಮವಾರ ದೆಹಲಿ ತಲುಪಲಿದ್ದಾರೆ.  ಪಂಜಾಬ್ ಮುಖ್ಯಮಂತ್ರಿಯಾಗುವ ಮುನ್ನ ಭಗವಂತ್ ಮಾನ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಮಾ.16ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಶಹೀದ್ ಭಗತ್ ಸಿಂಗ್ ಗ್ರಾಮದಲ್ಲಿ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ತಾನು ಸಂಗ್ರೂರ್‌ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ನೀಡಿದ ಭಗವಂತ್‌ ಮಾನ್‌, ದೆಹಲಿಗೆ ತೆರಳಿ ಸಂಗ್ರೂರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡು ತ್ತಿದ್ದೇನೆ. ಸಂಗ್ರೂರಿನ ಜನ ನನಗೆ ಇಷ್ಟು ವರ್ಷ ಪ್ರೀತಿ ಕೊಟ್ಟಿದ್ದಾರೆ, ಧನ್ಯವಾದಗಳು ಎಂದು ಹೇಳಿದ್ದಾರೆ.
ಭಗವಂತ್‌ ಮಾನ್‌ 2019 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 48 ವರ್ಷದ ಮಾನ್ ಸಂಗ್ರೂರ್ ಲೋಕ ಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ. ಮಾರ್ಚ್ 16 ರಂದು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ.