ಟ್ರಕ್‌ಗೆ ಜೀಪ್ ಡಿಕ್ಕಿ: ಐವರ ಸಾವು, ಏಳು ಮಂದಿ ಗಂಭೀರ ಗಾಯ
ಬುಲ್ಧಾನ :ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದು, ಏಳು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಜಲ್ನಾ ಜಿಲ್ಲೆಯ ರೋಹನ್‌ವಾಡಿ ಗ್ರಾಮದ ಜೀಪ್‌ ಪ್ರಯಾಣಿಕರೆಲ್ಲರೂ ಶೇಗಾಂವ್‌ ಪಟ್ಟಣದ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಾಗ ದೇಲ್‌ಗಾಂವ್‌ ರಾಜಾ ನಗರದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಿದರು.
ಐವರು ಜೀಪ್ ಪ್ರಯಾಣಿಕರು ಮೃತಪಟ್ಟಿದ್ದಾರೆ, ಏಳು ಮಂದಿ ಗಾಯಗೊಂಡಿ ದ್ದಾರೆ. ಅವರನ್ನು ಚಿಕಿತ್ಸೆಗಾಗಿ ಜಲ್ನಾದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.