 : ಇಲ್ಲಿನ ಗಂಡಸರಿಗೆ ಎರಡು ಮದುವೆ ಕಡ್ಡಾಯ; ಇದರ ಹಿಂದಿದೆ ವಿಚಿತ್ರ ಕಾರಣ!
ಹೆಣ್ಣು ಸಿಗುವುದಿಲ್ಲ, ಆರ್ಥಿಕ ತೊಂದರೆ.. ಹೀಗೆ ವಿವಿಧ ಕಾರಣಗಳಿಂದಾಗಿ ಈಗಿನ ಕಾಲದಲ್ಲಿ ಒಂದು ಮದುವೆ () ಆಗೋದೇ ಕಷ್ಟ ಎನ್ನುವಂತ ಪರಿಸ್ಥಿತಿ ಇದೆ. ಆದರೆ ಇಲ್ಲಿ ಮಾತ್ರ ಎರಡೆರೆಡು ಬಾರಿ ( ) ಮದುವೆಯಾಗುತ್ತಾರೆ. ಇದು ಇಲ್ಲಿನ ಸಂಪ್ರದಾಯ ( ) ಹೌದಾದರೂ ಇದರ ಕಾರಣ ಮಾತ್ರ ವಿಚಿತ್ರವೆನ್ನಬಹುದು.
ಭಾರತದಲ್ಲಿ () ಈ ಒಂದು ಹಳ್ಳಿಯಲ್ಲಿ ಪುರುಷರು ವಿಶಿಷ್ಟ ಸಂಪ್ರದಾಯವನ್ನು ಹೊಂದಿದ್ದಾರೆ. ಅವರು ಎರಡು ಬಾರಿ ಮದುವೆಯಾಗುತ್ತಾರೆ. ಈ ಪದ್ಧತಿಯು ಹಳ್ಳಿಯಲ್ಲಿ ಎಷ್ಟು ಬೇರೂರಿದೆ ಎಂದರೆ ಅದು ಈಗ ರೂಢಿಯಾಗಿ ಬಿಟ್ಟಿದೆ.
ಎರಡು ಮದುವೆ ಮಾಡಿಕೊಳ್ಳುವ ಸಂಪ್ರದಾಯಕ್ಕಿಂತಲೂ ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ ಅದರ ಹಿಂದಿರುವ ಕಾರಣ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದ ಹಿಂದಿನ ಕಾರಣ ನಿಜಕ್ಕೂ ಬೆರಗು ಹುಟ್ಟಿಸುತ್ತದೆ.
ಕೆಲವೊಂದು ಆಚರಣೆ, ಸಂಪ್ರದಾಯ, ಪದ್ಧತಿಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಭಾರತ- ಪಾಕಿಸ್ತಾನ ಗಡಿಯಲ್ಲಿರುವ ಭಾರತದ ಒಂದು ಹಳ್ಳಿಯಲ್ಲಿ ವಿಚಿತ್ರ ಸಂಪ್ರದಾಯ ಎಲ್ಲರಲ್ಲೂ ಬೆರಗು ಮೂಡಿಸುತ್ತದೆ.ಈ ಗ್ರಾಮದಲ್ಲಿ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ. ಸ್ಥಳೀಯ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಎರಡು ಮದುವೆಯಾಗದಿದ್ದರೆ ಅವನನ್ನು ಗ್ರಾಮದಿಂದ ಹೊರಹಾಕಲಾಗುತ್ತದೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಈ ಗ್ರಾಮದಲ್ಲಿ ಸುಮಾರು 600 ಮಂದಿ ವಾಸಿಸುತ್ತಿದ್ದಾರೆ. ಗ್ರಾಮದ ಪ್ರತಿಯೊಬ್ಬ ಪುರುಷನಿಗೆ ಕನಿಷ್ಠ ಇಬ್ಬರು ಪತ್ನಿಯರಿದ್ದಾರೆ.
ಅಚ್ಚರಿ ಎನಿಸುವ ಈ ಸಂಪ್ರದಾಯದ ಹಿಂದಿನ ಕಾರಣ ಇನ್ನಷ್ಟು ಬೆರಗು ಮೂಡಿಸುತ್ತದೆ. ದೇರಸರ್ ಗ್ರಾಮದ ನಿವಾಸಿಗಳು ಪುರುಷನ ಮೊದಲ ಹೆಂಡತಿ ಎಂದಿಗೂ ಮಕ್ಕಳನ್ನು ಹೆರುವುದಿಲ್ಲ ಎಂದು ನಂಬುತ್ತಾರೆ. ಹೀಗಾಗಿ ಮಕ್ಕಳನ್ನು ಹೊಂದಲು ಎರಡನೇ ಮದುವೆ ಅಗತ್ಯವೆಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ನಂಬಿಕೆಯು ಹಳ್ಳಿಯ ಪುರುಷರು ತಮ್ಮ ಮೊದಲ ಮದುವೆಯ ಅನಂತರ ಎರಡನೇ ಬಾರಿಗೆ ಮದುವೆಯಾಗುವಂತೆ ಮಾಡುತ್ತದೆ.
ಈ ವಿಚಿತ್ರ ನಂಬಿಕೆಯ ಮೂಲವು ಬಹಳ ಹಿಂದಿನದು. ಈ ಗ್ರಾಮದ ದಂಪತಿಗೆ ಬಹಳ ವರ್ಷ ಮಕ್ಕಳಾಗಲಿಲ್ಲ. ಹೀಗಾಗಿ ಆತ ಎರಡನೇ ಮದುವೆಯಾಗಿ ಮಕ್ಕಳನ್ನು ಪಡೆದನಂತೆ. ಈ ಘಟನೆ ಹಲವಾರು ಗ್ರಾಮಸ್ಥರ ಮನೆಯಲ್ಲೂ ನಡೆಯಿತು. ಹೀಗಾಗಿ ಈ ಗ್ರಾಮದಲ್ಲಿ ಎರಡು ಮದುವೆಯಾಗುವ ಸಂಪ್ರದಾಯ ಬೆಳೆದು ಬಂತು ಎನ್ನಲಾಗುತ್ತದೆ.
  : ಈ ದೇಶದಲ್ಲಿ ಪುರುಷರೇ ಸುರಕ್ಷಿತವಲ್ಲ, ಮಹಿಳೆಯರೇ ಮಾಡ್ತಾರೆ ಅತ್ಯಾಚಾರ!
ಈ ಅಸಾಮಾನ್ಯ ಸಂಪ್ರದಾಯದ ಹಿಂದೆ ಇನ್ನೊಂದು ಕಾರಣವೂ ಇದೆ. ಗ್ರಾಮವು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿದೆ. ನೀರು ತರಲು ಮಹಿಳೆಯರು ಪ್ರತಿದಿನ ಕನಿಷ್ಠ 5 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ಗರ್ಭಿಣಿಯರಿಗೆ ನೀರು ತರಲು ಅಷ್ಟು ದೂರ ನಡೆಯುವುದು ತುಂಬಾ ಸವಾಲಿನ ಕೆಲಸ. ಆದ್ದರಿಂದ ದೂರದಿಂದ ನೀರು ತರಬೇಕಾದ ಸಂದರ್ಭ ಬಂದಾಗ ಮಹಿಳೆಯರಿಗೆ ಹೊರೆಯನ್ನು ಕಡಿಮೆ ಮಾಡಲು ಗ್ರಾಮದ ಪುರುಷರು ಎರಡನೇ ಮದುವೆಯಾಗುತ್ತಾರೆ ಎನ್ನಲಾಗುತ್ತದೆ.