ರೈನಾವಾರಿ ಎನ್‌ಕೌಂಟರ್‌: ಇಬ್ಬರು ಭಯೋತ್ಪಾದಕರ ಹತ್ಯೆ
ಭಯೋತ್ಪಾದಕರ ಪೈಕಿ ಓರ್ವ ನ್ಯೂಸ್ ಪೋರ್ಟಲ್ ಪ್ರಧಾನ ಸಂಪಾದಕ
ಶ್ರೀನಗರ:ರೈನಾವಾರಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದ ಎನ್‌ ಕೌಂಟರ್‌ನಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಕೊಲೆಯಾದ ಉಗ್ರರಲ್ಲಿ ಒಬ್ಬನನ್ನು ರಯೀಸ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.
ಅನಂತನಾಗ್‌ ಮೂಲದ ಆನ್‌ಲೈನ್ ನ್ಯೂಸ್ ಪೋರ್ಟಲ್ ‘ವ್ಯಾಲಿ ನ್ಯೂಸ್ ಸರ್ವಿಸ್’ನಲ್ಲಿ ಪ್ರಧಾನ ಸಂಪಾದಕನಾಗಿ ರಯೀಸ್‌ ಭಟ್‌ ಕಾರ್ಯ ನಿರ್ವಹಿಸು ತ್ತಿದ್ದನು. ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಘಟನೆಗೆ ಸೇರ್ಪಡೆಯಾಗಿದ್ದನೆಂದು ಪೊಲೀಸರು ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಭಟ್‌ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಎನ್‌ಕೌಂಟರ್‌ನಲ್ಲಿ ಹತನಾದ ಮತ್ತೊಬ್ಬ ಭಯೋತ್ಪಾದಕನನ್ನು ಬಿಜ್‌ಬೆಹರಾ ನಿವಾಸಿ ಹಿಲಾಲ್ ಅಹ್ಮದ್ ಎಂದು ಗುರುತಿಸಲಾಗಿದೆ.