ನಾಳೆಯಿಂದ ರಷ್ಯಾದ ವಿದೇಶಾಂಗ ಸಚಿವರ ಭಾರತ ಭೇಟಿ
ನವದೆಹಲಿ:ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲವರೋವ್ ಗುರುವಾರದಿಂದ 2 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ರಷ್ಯಾ ಪಡೆಗಳು ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದ ಸಚಿವರೊಬ್ಬರ ಮೊದಲ ವಿದೇಶ ಪ್ರವಾಸ ಇದಾಗಿದೆ. ವಿದೇಶಾಂಗ ಇಲಾಖೆ, ‘ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲವರೋವ್ ಅವರು ಮಾ.31ರಿಂದ ಏಪ್ರಿಲ್ 1ರವರೆಗೆ ಭಾರತದ ಪ್ರವಾಸದಲ್ಲಿರುತ್ತಾರೆ’ ಎಂದು ಹೇಳಿದೆ.
ಈ ಸಂದರ್ಭದಲ್ಲಿ ರಷ್ಯಾವು ಭಾರತಕ್ಕೆ ರಿಯಾಯತಿ ದರದಲ್ಲಿ ತೈಲ ಮಾರಾಟ ಮತ್ತು ರಷ್ಯಾದ ಮೇಲೆ ಪಶ್ಚಿಮ ದೇಶಗಳು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆ ಇದೆ.