ಇಂದು ರಾಜ್ಯಕ್ಕೆ ರಾಗಾ ಆಗಮನ, ಸಿದ್ಧಗಂಗಾ ಮಠಕ್ಕೆ ಭೇಟಿ
ನವದೆಹಲಿ:ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಎರಡು ದಿನಗಳ ಭೇಟಿಗಾಗಿ ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಗುರುವಾರ ಮಧ್ಯಾಹ್ನ ಬೆಂಗಳೂರು ನಗರಕ್ಕೆ ಆಗಮಿಸುವ ಅವರು ನೇರವಾಗಿ ತುಮ ಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡು ವರು. ವಿಮಾನದಲ್ಲಿ ನಗರಕ್ಕೆ ಆಗಮಿಸುವ ರಾಹುಲ್‌ ಗಾಂಧಿ ಬಳಿಕ ರಸ್ತೆ ಮಾರ್ಗವಾಗಿ ಸಿದ್ಧಗಂಗಾ ಮಠ ತಲುಪಲಿದ್ದಾರೆ.
ಶಿವಕುಮಾರ ಸ್ವಾಮೀಜಿ ಅವರ 105ನೇ ಜಯಂತಿ ಪ್ರಯುಕ್ತ ಗದ್ದುಗೆಗೆ ನಮನ ಸಲ್ಲಿಸಿ ಬಳಿಕ ಸಂಜೆ 6.45ಕ್ಕೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹಕ್ಕೆ ವಾಪಸಾಗಲಿದ್ದಾರೆ. ಎರಡೂ ದಿನ ಪಕ್ಷದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಲಿಂ.ಡಾ.​ಶಿ​ವ​ಕು​ಮಾರ ಸ್ವಾಮೀಜಿ ಅವರ 115ನೇ ಜನ್ಮ​ದಿ​ನದ ಹಿನ್ನೆ​ಲೆ​ಯಲ್ಲಿ ಗುರು​ವಾರ ಸಿದ್ಧ​ಗಂಗಾ ಮಠಕ್ಕೆ ಭೇಟಿ ನೀಡ​ಲಿ​ರುವ ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ಅವ​ರಿಗೆ ಭರ್ಜರಿ ಸ್ವಾಗತ ನೀಡಲು ಪಕ್ಷ ಸಿದ್ಧತೆ ನಡೆ​ಸಿ​ದೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಸಂಜೆ 4 ಗಂಟೆಗೆ ಆಗ​ಮಿ​ಸುವ ರಾಹುಲ್‌ ಗಾಂಧಿ ಅವರು ತುಮಕೂರಿನ ಜಾಸ್‌ಟೋಲ್‌ ಗೇಟ್‌ ಬಳಿ ಇರುವ ಎಚ್‌ಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿಗೆ ತೆರ​ಳ​ಲಿ​ದ್ದಾರೆ.
ಏ.1 ರಂದು ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಕಾರಿ ಸಮಿತಿ ಉದ್ದೇಶಿಸಿ ರಾಹು​ಲ್‌ ಮಾತನಾಡಲಿದ್ದಾರೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ, ಕೆಪಿ​ಸಿಸಿ ಅಧ್ಯ​ಕ್ಷ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಸೇರಿ ಹಲವರು ಭಾಗವಹಿಸಲಿದ್ದಾರೆ.