ಹವಾಲಾ ಹಣ ಪ್ರಕರಣ: ಮಾಜಿ ಸಚಿವನ ಬಂಧನ
ಜಮ್ಮು:ಹವಾಲಾ ಹಣವನ್ನು ವಶಪಡಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವಜತೀಂದರ್ ಸಿಂಗ್ ಅಲಿಯಾಸ್ ‘ಬಾಬು ಸಿಂಗ್’ನನ್ನು ಶನಿವಾರ ಕಥುವಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಪೊಲೀಸರು ಹವಾಲಾ ದಂಧೆ ಭೇದಿಸಿದ ನಂತರ ಮತ್ತು ಏ.6 ರಂದು ಲುಕೌಟ್ ನೋಟಿಸ್ ಜಾರಿಗೊಳಿಸಿದ ನಂತರ ಸಿಂಗ್ ಮಾರ್ಚ್ 31 ರಿಂದ ತಲೆಮರೆಸಿಕೊಂಡಿದ್ದ. ಮಾಜಿ ಸಚಿವನನ್ನ ಕಥುವಾ ಜಿಲ್ಲೆಯಿಂದ ಬಂಧಿಸಲಾಗಿದ್ದು, ವಿಚಾರಣೆಗಾಗಿ ಜಮ್ಮುವಿಗೆ ಕರೆತರಲಾಗುತ್ತಿದೆ.
ಸಿಂಗ್, ಪಿಡಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದ. ಈಗ ನೇಚರ್-ಮ್ಯಾನ್‌ ಕೈಂಡ್ ಫ್ರೆಂಡ್ಲಿ ಗ್ಲೋಬಲ್ ಪಾರ್ಟಿ ಎಂಬ ಸಂಘಟನೆಯ ಅಧ್ಯಕ್ಷನಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಥುವಾದ ಸಿದ್ದಾಂತ್ ಶರ್ಮಾ ಮತ್ತು ಜಮ್ಮುವಿನ ಎಸ್ ಗುರುದೇವ್ ಸಿಂಗ್ ಮತ್ತು ಮೊಹಮ್ಮದ್ ಶ್ರೀಫ್ ಸರ್ತಾಜ್ ಎಂಬ ಮೂವರನ್ನು ಸಹ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಜಾವೇದ್, ಫಾರೂಕ್ ಖಾನ್ ಮತ್ತು ಖತೀಬ್, ಕೆನಡಾದ ಟೊರೊಂಟೊ ಸೇರಿದಂತೆ ತನ್ನ ವಿದೇಶಿ ಸಹಚರರ ಹೆಸರುಗಳನ್ನೂ ಷಾ ಬಹಿರಂಗಪಡಿಸಿದ್ದಾನೆ.