ಏ.14ರಂದು ‘ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಉದ್ಘಾಟನೆ
ನವದೆಹಲಿ:ಭಾರತದ 14 ಪ್ರಧಾನ ಮಂತ್ರಿಗಳ ಜೀವನ, ಅವರು ಕಳೆದ ಅದ್ಭುತ ಸಮಯಗಳು, ಅವರ ಅಪರೂಪದ ಛಾಯಾ ಚಿತ್ರಗಳು, ಭಾಷಣಗಳು, ವಿಡಿಯೋ ತುಣುಕುಗಳು, ಪತ್ರಿಕೆಗಳು, ಸಂದರ್ಶನಗಳು ಮತ್ತು ಮೂಲ ಬರಹಗಳನ್ನು ಒಳಗೊಂಡಿರುವವಸ್ತುಸಂಗ್ರಹಾಲಯವನ್ನು ಏ.14ರಂದು ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸ ಲಿದ್ದಾರೆ.
ದೆಹಲಿಯ ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಗುರುತಿಸಿ ನಿರ್ಮಿಸಲಾದ ‘ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಈ ಕಟ್ಟಡದ ಲೋಗೋ ‘ಅಶೋಕ ಚಕ್ರ’ ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ. ಇದು ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುತ್ತದೆ. ಮ್ಯೂಸಿಯಂನ ನಿರ್ಮಾಣವು ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಸಂವೇದನಾಶೀಲ ಗೊಳಿಸುವ ಮತ್ತು ಪ್ರೇರೇಪಿಸುವ ಮೋದಿಯವರ ಪ್ರಯತ್ನವಾಗಿದೆ.
14 ಪಿಎಂಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ವ್ಯಾಪಕ ಶ್ರೇಣಿಯ ಮಾಧ್ಯಮ ಮೂಲಗಳು ಬಳಸಲ್ಪಡುತ್ತವೆ. ಅವರ ಜೀವನ ಮತ್ತು ಸಮಯದ ಅಪರೂಪದ ಒಳ ನೋಟಗಳನ್ನು ಸಂಗ್ರಹಿಸಲು ಅವರ ಕುಟುಂಬ ಸದಸ್ಯರನ್ನು ಸಹ ಸಂಪರ್ಕಿಸಲಾಯಿತು.
ದೂರದರ್ಶನ, ಚಲನಚಿತ್ರ ವಿಭಾಗ, ಸಂಸದ್ ಟಿವಿ, ರಕ್ಷಣಾ ಸಚಿವಾಲಯ, ಮಾಧ್ಯಮ ಸಂಸ್ಥೆಗಳು ಭಾರತೀಯ ಮತ್ತು ವಿದೇಶಿ- ಮುದ್ರಣ ಮಾಧ್ಯಮ, ವಿದೇಶಿ ಸುದ್ದಿ ಸಂಸ್ಥೆಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತೋಷಖಾನಾ ಭಾರತೀಯ ಪ್ರಧಾನಿಗಳ ಕಥೆಗಳಿಗೆ ಸಮೃದ್ಧವಾಗಿ ಕೊಡುಗೆ ನೀಡಿವೆ.
ಮಾಜಿ ಪ್ರಧಾನಿಗಳ ಅಪರೂಪದ ಭಾವಚಿತ್ರಗಳು, ಭಾಷಣಗಳು, ವಿಡಿಯೋ ತುಣುಕುಗಳು, ಪತ್ರಿಕೆಗಳು, ಸಂದರ್ಶನಗಳು ಮತ್ತು ಮೂಲ ಬರಹಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುತ್ತದೆ.