ಎಂಟಿ ಡಿಎನ್‍ಎ ವಿಕಸನದೊಂದಿಗೆ ಯಮಾಹಾ ಎಂಟಿ-125 2.0 ಆವೃತ್ತಿ
ನವದೆಹಲಿ:ಇಂಡಿಯಾ ಯಮಾಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್, ಉಲ್ಲಾಸಭರಿತ ಬ್ರಾಂಡ್ ತಂತ್ರ `ದಿ ಕಾಲ್ ಆಫ್ ದಿ ಬ್ಲ್ಯೂ’ ಭಾಗವಾಗಿ ಜನಪ್ರಿಯ ಎಂಟಿ-15 ಮಾಡೆಲ್‍ನ ವಿಕಸಿತ ಮತ್ತು ವಿನೂತನವಾದ ಆವೃತ್ತಿ 2.0 ಅನ್ನು ಹಲವು ಹೊಸ ಫೀಚರ್‍ಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.
ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಹೇಳುವುದಾದರೆ ಎಂಟಿ-15 ಆವೃತ್ತಿ 2.0 ಹೊಸದಾಗಿ ವಿನ್ಯಾಸಗೊಳಿಸಲಾದ, ಸಂಪೂರ್ಣ ಡಿಜಿಟಲ್ ಎಲ್‍ಇಡಿ ಕ್ಲಸ್ಟರ್ ಹೊಂದಿದ್ದು, ಇದು (ಇಗ್ನಿಶನ್ ಅನ್ನು ಚಾಲೂ ಮಾಡಿದಾಗ) ಗಿಯರ್ ಶಿಫ್ಟ್, ಗಿಯರ್ ಸ್ಥಿತಿ ಮತ್ತು ವಿವಿಎ ಅನ್ನು ಪ್ರದರ್ಶಿಸುತ್ತದೆ. ಎಲ್‍ಸಿಡಿ ಕ್ಲಸ್ಟರ್ ಕರೆ, ಇ-ಮೇಲ್ ಮತ್ತು ಎಸ್‍ಎಂಎಸ್ ಸಂದೇಶವನ್ನೂ ಸ್ಮಾರ್ಟ್‍ಫೋನ್‍ನ ಬ್ಯಾಟರಿ ಸ್ಥಿತಿಗತಿಯೊಂದಿಗೆ ಬ್ಲ್ಯೂ ಟೂಥ್ ಎನೆಬಲ್ಡ್ ವೈಫೈ ಕನೆಕ್ಟ್ ಆ್ಯಪ್‍ನೊಂದಿಗೆ ಪ್ರದರ್ಶಿಸುತ್ತದೆ. ನಿರ್ವಹಣೆ ಶಿಫಾರಸುಗಳು, ನಿಲುಗಡೆ ಸ್ಥಳ, ಇಂಧನ ಬಳಕೆ, ಅಸಮರ್ಪಕ ಕಾರ್ಯನಿರ್ವಹಣೆ, ಸ್ಮಾರ್ಟ್‍ಫೋನ್‍ ನಲ್ಲಿನ ರೆವ್ಸ್ ಡ್ಯಾಶ್‍ಬೋರ್ಡ್ ಮತ್ತು ರ್ಯಾಂಕಿಂಗ್‍ ಗಳನ್ನೂ ಪ್ರದರ್ಶಿಸುತ್ತದೆ.
ಯಮಾಹಾ ಮೋಟಾರ್ ಇಂಡಿಯಾ ಸಮೂಹ ಕಂಪನಿಗಳ ಚೇರ್ಮನ್ ಐಶಿನ್ಚಿಹಾನಾಹೇಳಿದರು,
`ಯಮಾಹಾ ಅಭಿಮಾನಿಗಳು ಎಂಟಿ-15 ಅನ್ನು ಅದರ ಸಾಮಥ್ರ್ಯ ಮತ್ತು ಕಾರ್ಯಕ್ಷಮತೆಗಾಗಿ ಸದಾ ಹೊಗಳುತ್ತಾರೆ ಹಾಗೂ ಡಾರ್ಕ್ ವಾರಿಯರ್‍ನ ಮತ್ತಷ್ಟು ವಿಕಸಿತವಾದ ಆವೃತ್ತಿಗಾಗಿ ಕಾಯುತ್ತಿದ್ದಾರೆ.  ಹೊಸ ಎಂಟಿ-15 ಆವೃತ್ತಿ 2.0 ಬಿಡುಗಡೆಯು ಯಮಾಹಾ ತನ್ನ ಗ್ರಾಹಕರ ನಿರೀಕ್ಷೆಗಳನ್ನು ತಲುಪಿರುವುದರ ಪರಿಪೂರ್ಣ ಪ್ರತಿನಿಧಿಯಾಗಿದ್ದು, ಹಾಲಿ ಚಾಲ್ತಿಯಲ್ಲಿರುವ `ದಿ ಕಾಲ್ ಆಫ್ ದಿ ಬ್ಲ್ಯೂ’ ಬ್ರಾಂಡ್ ತಂತ್ರಗಾರಿಕೆಯ ಭಾಗವಾಗಿದೆ. ಹೊಸ ಫೀಚರ್‍ಗಳು ಮತ್ತು ತಂತ್ರಜ್ಞಾನದೊಂದಿಗೆ ಎಂಟಿ-15 ಆವೃತ್ತಿ 2.0 ವಾರಾಂತ್ಯದ ಸವಾರಿಗಳು ಮತ್ತು ದೈನಂದಿನ ಪ್ರಯಾಣದ ಅಗತ್ಯಗಳ ನಡುವೆ ಪರಿಪೂರ್ಣ ಸಮತೋಲನ ಬಯಸುವ ಹೆಚ್ಚು ಯುವ ರೈಡರ್‍ಗಳನ್ನು ಆಕರ್ಷಿಸುತ್ತದೆ ಎನ್ನುವ ವಿಶ್ವಾಸವಿದೆ’.
ಮುಂಭಾಗದ ವಿನ್ಯಾಸದ ಕುರಿತು ಹೇಳುವುದಾದರೆ, ಎಂಟಿ-15 ಆವೃತ್ತಿ 2.0 ಆಕರ್ಷಕ ಎಂಟಿ ಸ್ಟೈಲ್‍ನೊಂದಿಗೆ ರೈಡಿಂಗ್ ಸ್ಥಿತಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ ಮತ್ತು `ಟಾರ್ಕ್ ಮತ್ತು ಸಾಮಥ್ರ್ಯ’ ಹೆಚ್ಚಳಕ್ಕೂ ಒತ್ತು ನೀಡಲಾಗಿದೆ.  ಎಂಟಿ-15 ಆವೃತ್ತಿ 2.0 ಸಯಾನ್ ಸ್ಟಾರ್ಮ್ (ಹೊಸ) ಮತ್ತು ರೇಸಿಂಗ್ ಬ್ಲ್ಯೂ (ಹೊಸ) ಬಣ್ಣಗಳೂ ಸೇರಿದಂತೆ ಐಸ್ ಫ್ಲೂ ವರ್ಮಿಲಿಯನ್ ಮತ್ತು ಮೆಟಾಲಿಕ್ ಬ್ಲಾಕ್ ಬಣ್ಣಗಳಲ್ಲಿಯೂ ಲಭ್ಯವಿದ್ದು, ಎಡ್ಜಿಯರ್ ಸೆಟ್ ಗ್ರಾಫಿಕ್ಸ್‍ನೊಂದಿಗೆ ಆಕ್ರಮಣಕಾರಿ ಸ್ಟೈಲ್ ಮತ್ತು ಸ್ಪೋರ್ಟಿ ಕ್ಯಾರೆಕ್ಟರ್ ಅನ್ನು ಹೊಂದಿದೆ.
ಎಂಟಿ-15ಆವೃತ್ತಿ 2.0ದೇಶಾದ್ಯಂತಯಮಾಹಾವಿತರಕರಬಳಿಲಭ್ಯವಿದೆಮತ್ತುಆರಂಭಿಕಬೆಲೆಯುರೂ.1,59,900/-