  2024: ಗಮನಿಸಿ: SBIಯಲ್ಲಿ ಖಾಲಿ ಇದೆ 1,513 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಬೆಂಗಳೂರು:ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರಲ್ಲೇ ಇದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ  (   ) ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (  2024). ಡೆಪ್ಯುಟಿ ಮ್ಯಾನೇಜರ್‌, ಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌ ಸೇರಿದಂತೆ ಒಟ್ಟು 1,513 ಹುದ್ದೆಗಳು ಖಾಲಿ ಇವೆ. ಬಿಇ/ಬಿ.ಟೆಕ್‌,ಎಂಇ/ಎಂ.ಟೆಕ್‌ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್‌ 4 ( ).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ & ಡೆಲಿವರಿ- 187 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಸಪೋರ್ಟ್‌ & ಕ್ಲೌಡ್ ಆಪರೇಷನ್ಸ್‌- 412  ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) -ನೆಟ್‌ವರ್ಕಿಂಗ್‌ ಆಪರೇಷನ್ಸ್‌ – 80 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌, ಎಂಇ/ಎಂ.ಟೆಕ್‌ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್‌ – 27 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫರ್ಮೇಷನ್‌ ಸೆಕ್ಯುರಿಟಿ – 7 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿಡೆಪ್ಯುಟಿ ಮ್ಯಾನೇಜರ್‌ – 798  ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌ – ಐಟಿ ರಿಸ್ಕ್‌ – 1 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿಅಸಿಸ್ಟಂಟ್‌ ವೈಸ್‌ ಪ್ರೆಸಿಡೆಂಟ್‌-ಐಟಿ ರಿಸ್ಕ್‌ – 1 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ವಯೋಮಿತಿ ಮತ್ತು ಅರ್ಜಿ ಶುಲ್ಕ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 21ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಅರ್ಜಿ ಶುಲ್ಕವಾಗಿ ಸಾಮಾನ್ಯ/ಇಡಬ್ಲ್ಯುಎಸ್‌/ಒಬಿಸಿ ಅಭ್ಯರ್ಥಿಗಳು 750 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಆನ್‌ಲೈನ್‌ ಮೂಲಕ ನಡೆಸುವ ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಹುದ್ದೆಗಳಿಗೆ ಅನುಗುಣವಾಗಿ 48,480 ರೂ. – 93,960 ರೂ. ಮಾಸಿಕ ವೇತನ ದೊರೆಯಲಿದೆ.
ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಅಸಿಸ್ಟಂಟ್‌/ಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ:..inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: : ಸೈಂಟಿಸ್ಟ್‌ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌: ಇಲ್ಲಿದೆ ಹೊಸ ಟೈಮ್‌ ಟೇಬಲ್‌