 : ಫೋನ್‌ನಲ್ಲಿ ಮಾತನಾಡುತ್ತಲೇ ಐದನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ
ಹೈದರಾಬಾದ್:ಯುವತಿಯೊಬ್ಬಳು ಫೋನಿನಲ್ಲಿ ಮಾತಾಡಿಕೊಂಡು ಅಪಾರ್ಟ್‌ಮೆಂಟ್‌ನ ಐದನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ( ) ಮಾಡಿಕೊಂಡ ಘಟನೆ ಹೈದರಾಬಾದ್‌ನ ರಾಮನಗರದಲ್ಲಿ ( ) ನಡೆದಿದೆ. ಇದರ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ( ) ವೈರಲ್ ( ) ಆಗಿದೆ. ಸನಾ ಬೇಗಂ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸನಾ ಬೇಗಂ ಕಟ್ಟಡದ ಐದನೇ ಮಹಡಿಯಲ್ಲಿ ನಿಂತಿದ್ದಾಗ ಕೆಳಗಿದ್ದವರು ಜಿಗಿಯಬೇಡಿ ಎಂದು ಆಕೆಗೆ ಕೂಗಿ ಹೇಳುತ್ತಿರುವುದು ಕೂಡ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಮಹಿಳೆ ಐದನೇ ಮಹಡಿಯ ತುದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಸ್ಥಳೀಯರು ಆಕೆಗೆ ಹಿಂದೆ ಸರಿಯುವಂತೆ ಕೂಗಿ ಹೇಳುತ್ತಿದ್ದರೂ ಕೇಳಿಸಿಕೊಳ್ಳದ ಆಕೆ ಕೆಲವು ಸೆಕೆಂಡಿನ ಕೆಳಕ್ಕೆ ಜಿಗಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
⚠️  Warningఐదో అంతస్తు నుంచి దూకి మహిళ ఆత్మహత్యహైదరాబాద్ – రాంనగర్‌లోని గిరి శిఖర అపార్ట్‌మెంట్స్‌ బిల్డింగ్ పైనుంచి దూకి ఆత్మహత్య చేసుకున్న సనా బేగం(23) అనే మహిళ.. అక్కడికక్కడే మృతిఆత్మహత్యకు గల కారణాలు తెలియాల్సి ఉంది.. సంఘటన స్థలానికి చేరుకొని వివరాలు…../77wofXKIL0
ಚಿಕ್ಕಡಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಟಿಸಿ ಕ್ರಾಸ್ ರಸ್ತೆ ಬಳಿ ಇರುವ ಗಿರಿ ಶಿಖರ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಘಟನೆಯ ಕುರಿತು ಸಾಕ್ಷ್ಯ ಮತ್ತು ವಿವರಗಳನ್ನು ಸಂಗ್ರಹಿಸಿ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಕಳುಹಿಸಿದರು.
 : ಹಣವಿಲ್ಲ ಎಂದ ಯುವಕನ ಬೈಕ್ ಎಗರಿಸಿದ್ದ ಆಸಾಮಿ ಬಂಧನ
ಯುವತಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಚಿಕ್ಕದಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.