3,688 ಹೊಸ ಕೋವಿಡ್‌ ಪ್ರಕರಣ ಪತ್ತೆ
ನವದೆಹಲಿ:ಒಟ್ಟು 3,688 ಹೊಸ ಕೋವಿಡ್‌ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಪತ್ತೆಯಾಗಿವೆ. ಇದೇ ಅವಧಿ ಯಲ್ಲಿ 50 ಸಾವುಗಳು ಸಂಭವಿಸಿದೆ.
ಹಿಂದಿನ ದಿನ 3,377 ಹೊಸ ಪ್ರಕರಣಗಳು ವರದಿಯಾಗಿದ್ದವು. ಇದರೊಂದಿಗೆ ಕೋವಿಡ್‌ ಏರುಗತಿಯ ಟ್ರೆಂಡ್‌ ಕೂಡ ಮುಂದು ವರಿದಿದೆ.
ಒಂದು ದಿನದ ಈ ಅವಧಿಯಲ್ಲಿ 2,496 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಭಾರತದಲ್ಲಿ ಒಟ್ಟು 18,684 ಸಕ್ರಿಯ ಪ್ರಕರಣಗಳಿವೆ.