 : ಗೊರಕೆ ಹೊಡೆಯುತ್ತಾಳೆ ಎಂದು  ಮಗಳ ಖಾಸಗಿ ಅಂಗಕ್ಕೆ ಕಾದ ಕಬ್ಬಿಣವಿಟ್ಟ ಮಲತಾಯಿ…
ತಾಯಿಯೆಂದರೆ ದೇವರಿಗೆ ಸಮಾನ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ () ಮಗಳು ಗೊರಕೆ ಹೊಡೆಯುತ್ತಾಳೆ ಎಂದು ಅವಳ ತುಟಿ, ಖಾಸಗಿ ಭಾಗಗಳನ್ನು  ರಾಡ್‌ ಬಿಸಿ ಮಾಡಿ ಸುಟ್ಟು ( ) ರಾಕ್ಷಸಿ ಪ್ರವೃತ್ತಿಯನ್ನು ತೋರಿದ್ದಾಳೆ. ಐದು ವರ್ಷದ ಮಗು ಯಾರ ಬಳಿಯೂ ಇದನ್ನು ಹೇಳಲಾಗದೆ ಒದ್ದಾಡುತ್ತಿದ್ದಾಗ ಮಗುವಿನ ತಂದೆಯ ಗಮನಕ್ಕೆ ಇದು ಬಂದಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಕಾಸರವಾಡಿಯ ನಿವಾಸಿ ಶುಭಂ ಮೋಕಿಂದ್ರರಾವ್ ಮಾಗ್ರೆ ಅವರ ಎರಡನೇ ಪತ್ನಿ ಪೂಜಾ ಶುಭಂ ಮಾಗ್ರೆ  ಈ ಕೃತ್ಯ ಎಸಗಿದಾಕೆ.
ಶುಭಂ ಮಾಗ್ರೆ  ಮತ್ತು ಪೂಜಾ ಮಾಗ್ರೆ , ಇಬ್ಬರಿಗೂ ಎರಡನೇ ಮದುವೆಯಾಗಿತ್ತು. ಹಿಂದಿನ ಮದುವೆಯಿಂದ ಪಡೆದ ಮಕ್ಕಳೊಂದಿಗೆ ಇಬ್ಬರೂ ಕಾಸರವಾಡಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಶುಭಂ ಮಾಗ್ರೆ  ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಪೂಜಾ ಮಾಗ್ರೆ  ಗಂಡನ ಮೊದಲ ಹೆಂಡತಿಯ ಮಗಳಿಗೆ ಚಿತ್ರಹಿಂಸೆ ನೀಡಿದ್ದಾಳೆ.
ಬಾಲಕಿ ಮಲಗಿದ್ದಾಗ ಗೊರಕೆ ಹೊಡೆಯಲು ಪ್ರಾರಂಭಿಸಿದ್ದರಿಂದ ಕೋಪಗೊಂಡು ಬಾಲಕಿಗೆ ಹೊಡೆದಿದ್ದಾಳೆ ಮಾತ್ರವಲ್ಲದೇ ಕಬ್ಬಿಣದ ರಾಡ್ ಬಿಸಿ ಮಾಡಿ ಮಗುವಿನ ಕೆನ್ನೆ, ತುಟಿ, ಬಾಯಿ, ಕುತ್ತಿಗೆ ಮತ್ತು ಖಾಸಗಿ ಭಾಗಗಳ ಮೇಲೆ ಗಾಯಮಾಡಿದ್ದಾಳೆ. ಇದರಿಂದ ಬಾಲಕಿಯ ದೇಹದ ಮೇಲೆ ಆಳವಾದ ಗಾಯಗಳಾಗಿವೆ.
ಕೆಲಸಕ್ಕೆ ಹೋಗಿದ್ದ ಬಾಲಕಿಯ ತಂದೆ ಶುಭಂ ಮೋಕಿಂದ್ರರಾವ್ ಮಾಗ್ರೆ ಮನೆಗೆ ಮರಳಿದಾಗ ಮಗಳ ದೇಹದ ಮೇಲಿದ್ದ ಗಾಯದ ಗುರುತನ್ನು ನೋಡಿ ಕಾರಣ ಕೇಳಿದಾಗ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಬಳಿಕ ಎಲ್ಲವನ್ನೂ ತಂದೆಯ ಬಳಿ ಹೇಳಿಕೊಂಡಿದೆ.  ತಕ್ಷಣ ಮಗಳನ್ನು  ತಂದೆ  ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
 : ಗಣೇಶ ಮೂರ್ತಿ ವಿಸರ್ಜನೆಗೆ ಕೆರೆಗೆ ಇಳಿದಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲು
ಮಗುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಬಳಿಕ ಶಿರೋಲಿ ಎಂಐಡಿಸಿ ಪೊಲೀಸ್ ಠಾಣೆಗೆ ತೆರಳಿ ಪೂಜಾ ಮ್ಯಾಗ್ರೆ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಪೂಜಾ ಮಾಗ್ರೆಯನ್ನು ಬಂಧಿಸಿದ್ದಾರೆ.