ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು
ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇಂದ್ರಾಣಿ ಅವರು ಈಗಾಗಲೇ ಆರುವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ.
ಹೀಗಾಗಿ, ಅವರಿಗೆ ಜಾಮೀನು ನೀಡಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ. ಮತ್ತೊಬ್ಬ ಆರೋಪಿ ಪೀಟರ್ ಇಂದ್ರಾಣಿ ಮುಖರ್ಜಿ ಫೆಬ್ರುವರಿ 2020 ರಿಂದ ಜಾಮೀನಿನ ಮೇಲಿದ್ದಾರೆ.
ಇಂದ್ರಾಣಿ, ಮೊದಲ ಪತಿ ಸಂಜೀವ್‌ ಖನ್ನಾ, ಎರಡನೇ ಪತಿ ಮತ್ತು ಮಾಧ್ಯಮ ಕ್ಷೇತ್ರದ ಉದ್ಯಮಿ ಪೀಟರ್‌ ಮುಖರ್ಜಿ ಪ್ರಕರಣದ ಆರೋಪಿಗಳು. 2012ರ ಮೇ 23ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪೆನ್ ತಾಲೂಕಿನಲ್ಲಿ 24 ವರ್ಷದ ಶೀನಾ ಬೋರಾ ಶವವಾಗಿ ಪತ್ತೆಯಾಗಿದ್ದರು.