1993ರ ಸ್ಫೋಟ ಪ್ರಕರಣ: ಜೂನ್ 13ರವರೆಗೂ ನ್ಯಾಯಾಂಗ ಬಂಧನ
ನವದೆಹಲಿ:ಸರಣಿ ಸ್ಫೋಟ ಪ್ರಕರಣ (ಮುಂಬೈ 1993)ದಲ್ಲಿ ಬಂಧಿತ ರಾಗಿರುವ ನಾಲ್ವರು ಆರೋಪಿಗಳನ್ನು ವಿಶೇಷ ನ್ಯಾಯಾ ಲಯವು ಜೂನ್ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಅಬು ಬಕರ್, ಸಯ್ಯದ್ ಖುರೇಷಿ, ಮೊಹಮ್ಮದ್ ಶೋಬ್ ಖುರೇಷಿ ಮತ್ತು ಮೊಹಮ್ಮದ್ ಯೂಸುಫ್ ಇಸ್ಮಾಯಿಲ್ ಶೇಖ್ ಅವರನ್ನು ಸೋಮವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸಿಬಿಐ ಅವರನ್ನು ಇನ್ನೆರಡು ವಾರಗಳ ಕಾಲ ಕಸ್ಟಡಿಗೆ ಕೋರಿತ್ತು. ಆದರೆ ವಿಶೇಷ ನ್ಯಾಯಾಲಯ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತಲೆಮರೆಸಿಕೊಂಡಿದ್ದ ನಾಲ್ವರನ್ನು ಕಳೆದ ವಾರ ಮುಂಬೈಗೆ ಕರೆತರಲಾಗಿದ್ದು, ಸ್ಫೋಟ ಪ್ರಕರಣದಲ್ಲಿ ಅವರ ಪಾತ್ರವನ್ನು ತನಿಖೆ ಮಾಡಲು ಸಿಬಿಐ ಕಸ್ಟಡಿಗೆ ಕೋರಿತ್ತು. ತಿಂಗಳ ಆರಂಭದಲ್ಲಿ ಅವರನ್ನು ಗುಜರಾತ್ ಎಟಿಎಸ್ ಬಂಧಿಸಿತ್ತು.