ಡಬ್ಲ್ಯುಎಫ್‌-510 ವೈರ್‌ಲೆಸ್ಇಯರ್‌ಬಡ್ಸ್ಪರಿಚಯಿಸಿದಸೋನಿಇಂಡಿಯಾ; ಹಿಂದೆಂದೂ ಇಲ್ಲದ ಬೆಲೆ₹ 3,990ಗೆಲಭ್ಯ (ಕ್ಯಾಷ್‌ಬ್ಯಾಕ್‌ ಸೌಲಭ್ಯ ಸೇರಿದಂತೆ)
ಸೋನಿ ಇಂಡಿಯಾವು  ಡಬ್ಲ್ಯುಎಫ್‌-ಸಿ510 (- 510) ವೈರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಇಂದು ದೇಶಿ ಮಾರುಕಟ್ಟೆಗೆ ಪರಿಚಯಿಸಿದ್ದು,  ಸೋನಿಯ   ಬಹು ಜನಪ್ರಿಯ ಗುಣಮಟ್ಟದ ಧ್ವನಿಯನ್ನು ಪುಟ್ಟಗಾತ್ರದ ವಿನ್ಯಾಸದಲ್ಲಿ ಒದಗಿಸಿದೆ.
ಈ ಇಯರ್‌ಬಡ್‌ಗಳು ಕೈಗೆಟುಕುವ ಬೆಲೆಯಲ್ಲಿ ಹೆಚ್ಚುವರಿ ಸೌಲಭ್ಯಗಳೊಂದಿಗೆ ಶಕ್ತಿಯುತ ಬ್ಯಾಟರಿ ಬಾಳಿಕೆ ಮತ್ತು ಆರಾಮದಾಯಕ ವಿನ್ಯಾಸ  ಒಳಗೊಂಡಿವೆ.  ಇದು ಇಡೀ ದಿನ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಲಿಸಲು  ಸೂಕ್ತವಾಗಿದೆ. ನೀಲಿ, ಹಳದಿ, ಕಪ್ಪು ಹಾಗೂ ಬಿಳಿಬಣ್ಣದ  ಇಯರ್‌ಬಡ್ಸ್‌ಗಳಲ್ಲಿ ನಿಮಗೆ ಸೂಕ್ತವಾದ ಬಣ್ಣವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಸೋನಿಯ ಈ ಹಿಂದಿನ ಇಯರ್‌ಬಡ್ಸ್‌ಗಳಿಗೆ ಹೋಲಿಸಿದರೆ ಈ ಡಬ್ಲ್ಯುಎಫ್‌-510 ಇಯರ್‌ಬಡ್ಸ್‌ಗಳು ಸಣ್ಣ ಗಾತ್ರದ ವಿನ್ಯಾಸ ಒಳಗೊಂಡಿವೆ.  ಡಬ್ಲ್ಯುಎಫ್‌-ಸಿ510   ಇಯರ್‌ಬಡ್ಸ್‌ಗಳು  ಸೋನಿಯ ಅತ್ಯಂತ ಚಿಕ್ಕ ಗಾತ್ರದ  ಬಾಹ್ಯ ಸದ್ದು ನಿಯಂತ್ರಿಸುವ ಕ್ಲೋಸ್ಡ್‌ ಟೈಪ್‌  ಇಯರ್‌ಬಡ್‌ಗಳಾಗಿವೆ, ಸಣ್ಣ ಕಿವಿಗಳನ್ನು ಹೊಂದಿರುವವರಲ್ಲಿಯೂ ಈ ಇಯರ್‌ ಬಡ್‌ಗಳು  ಸ್ಥಿರವಾಗಿ  ಇರಲಿವೆ. ಡಬ್ಲ್ಯುಎಫ್‌-ಸಿ510   ಇಯರ್‌ಬಡ್‌ಗಳು ಕಿವಿಗಳಲ್ಲಿ ಹೆಚ್ಚು ಸ್ಥಿರವಾಗಿ ಇರುವುದಕ್ಕೆ ಮೇಲ್ಮೈ ವಿನ್ಯಾಸದೊಂದಿಗೆ ಮಾನವನ ಕಿವಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಆಕಾರ ಹೊಂದಿವೆ. ಬಳಕೆದಾರರಿಗೆ ಹೆಚ್ಚುವರಿ ಅನುಕೂಲತೆ ಒದಗಿಸಲು ಈ  ಇಯರ್‌ಬಡ್‌ಗಳು ದುಂಡಗಿನ ವಿನ್ಯಾಸ ಮತ್ತು ಕಡಿಮೆ ಪ್ರಖರತೆಯ ಮ್ಯಾಟ್ ಫಿನಿಷ್ ‌  ಸಹ ಒಳಗೊಂಡಿವೆ. ಜೊತೆಗೆ ಹೆಚ್ಚಿನ ಶ್ರಮ ಇಲ್ಲದೆ ಇವುಗಳ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಮತಟ್ಟಾದ ಮತ್ತು ಅಗಲವಾದ ಮೇಲ್ಮೈ ಬಟನ್ ಅನ್ನು ಇದರಲ್ಲಿ ಸೇರ್ಪಡೆ ಮಾಡಲಾಗಿದೆ.  ಅಂದರೆ ನೀವು ಯಾವುದೇ ಅಡಚಣೆಗಳಿಲ್ಲದೆ ನಿಮ್ಮ ಇಷ್ಟದ ಸಂಗೀತವನ್ನು ಆಲಿಸಬಹುದು.
ಸಣ್ಣ ಗಾತ್ರದ ಈ  ಇಯರ್‌ಬಡ್‌ಗಳ ಜೊತೆಗೆ ಪುಟ್ಟ ಗಾತ್ರದ ಚಾರ್ಜಿಂಗ್ ಕೇಸ್ ಬರುತ್ತದೆ. ಸಿಲಿಂಡರ ಆಕಾರದ  ಪುಟ್ಟದಾದ ಚಾರ್ಜಿಂಗ್ ಕೇಸ್, ಹಿಂದಿನ ಮಾದರಿಗೆ ಹೋಲಿಸಿದರೆ ತೆಳುವಾದ ವಿನ್ಯಾಸ  ಹೊಂದಿದೆ.  ಪ್ಯಾಂಟ್‌ ಅಥವಾ ಷರ್ಟ್‌ನ ಕಿಸಿಯಲ್ಲಿ ಅಥವಾ ಬ್ಯಾಗ್‌ನಲ್ಲಿ ಸುಲಭವಾಗಿ ಸಾಗಿಸಲು ಇದು ಹೆಚ್ಚಿನ ಅನುಕೂಲತೆ ಹೊಂದಿದೆ. ನೀವು ಹೋದಲ್ಲೆಲ್ಲಾ ಇಯರ್‌ಬಡ್‌ಗಳನ್ನು ಸುಲಭವಾಗಿ ಹೊರ ತೆಗೆದು ಬಳಸಲು ಇವು  ನಿಮಗೆ ಅನುಕೂಲತೆ ಒದಗಿಸಿ ಕೊಡುತ್ತವೆ. 11 ಗಂಟೆಗಳವರೆಗೆ ಮತ್ತು ಚಾರ್ಜಿಂಗ್‌ ಕೇಸ್‌ನ ನೆರವಿನಿಂದ ಹೆಚ್ಚುವರಿ 11 ಗಂಟೆಗಳವರೆಗೆ ದೀರ್ಘಾವಧಿಯ ಬ್ಯಾಟರಿ ಬಾಳಿಕೆಯೊಂದಿಗೆ, ನೀವು ಗಂಟೆಗಳ ಕಾಲ ಅಡೆತಡೆರಹಿತವಾಗಿ ಇವುಗಳ ಬಳಕೆಯನ್ನು ಆನಂದಿಸಬಹುದು. 5 ನಿಮಿಷಗಳ ತ್ವರಿತ ಚಾರ್ಜಿಂಗ್,  ನಿಮಗೆ 60 ನಿಮಿಷಗಳವರೆಗೆ ಕೇಳುವ ಸಮಯವನ್ನು ಒದಗಿಸುತ್ತದೆ. ನೀವು ದಿನಪೂರ್ತಿ ಸಂಗೀತ ಆಸ್ವಾದಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.
ಡಬ್ಲ್ಯುಎಫ್‌-ಸಿ510   ಇಯರ್‌ಬಡ್‌ಗಳು ಸೋನಿಯ ಮಲ್ಟಿಪಾಯಿಂಟ್ ಕನೆಕ್ಷನ್‌ಗೆ ಹೊಂದಿಕೆಯಾಗುತ್ತವೆ. ಇದು ನಿಮಗೆ ಏಕಕಾಲಕ್ಕೆ ಎರಡು ಬ್ಲೂಟೂತ್® ಸಾಧನಗಳ ಜೊತೆಗೆ ಸಂಪರ್ಕ ಸಾಧಿಸಲು  ಅನುವು ಮಾಡಿಕೊಡುತ್ತದೆ. ಐಪಿಎಕ್ಸ್‌4 ಜಲ ಪ್ರತಿರೋಧದ ಗುಣಮಟ್ಟದ ನೆರವಿನಿಂದ ಈ ಇಯರ್‌ಬಡ್‌ಗಳು ಒದ್ದೆಯಾಗುವಿಕೆ ಮತ್ತು ಬೆವರುವಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ವಿವಿಧ ಪರಿಸ್ಥಿತಿಗಳಲ್ಲಿ ಬಾಳಿಕೆಯನ್ನು ಖಾತ್ರಿಪಡಿಸುತ್ತವೆ. ‘ತ್ವರಿತ ಬಳಕೆ’ ಸೌಲಭ್ಯದ ನೆರವಿನಿಂದ ನೀವು ಸುಲಭವಾಗಿ ಸ್ಪಾಟಿಫೈ () ಟ್ಯಾಪ್ ಅನ್ನು ನಿರ್ವಹಿಸಬಹುದು. ನಿಮ್ಮ ಇಷ್ಟದ ರಾಗಗಳನ್ನು ಕೆಲವೇ ಸರಳ ವಿಧಾನಗಳಲ್ಲಿ ಕಾರ್ಯಾರಂಭ  ಮಾಡಲು ಅವಕಾಶ ಒದಗಿಸುತ್ತದೆ. ಡಬ್ಲ್ಯುಎಫ್‌-ಸಿ510 ಅನ್ನು ನಿಮ್ಮ ಸಾಧನದ ಜೊತೆಗೆ ಕ್ಷಿಪ್ರವಾಗಿ ಫಾಸ್ಟ್ ಪೇರ್ ಮತ್ತು ಸ್ವಿಫ್ಟ್ ಪೇರ್‌ ನೆರವಿನಿಂದ ಸುಲಭವಾಗಿ ಜೋಡಿಸಬಹುದು. ಇದಕ್ಕೆ ಪೂರಕವಾಗಿ, ಚಾರ್ಜಿಂಗ್ ಕೇಸ್‌ನಿಂದ ಹೊರತೆಗೆದ ನಂತರ ನೀವು ಎಡ ಅಥವಾ ಬಲ ಇಯರ್‌ಬಡ್  ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು, ಈ ಇಯರ್‌ಬಡ್‌ಗಳು ಬಹುಬಗೆಯ ಬಳಕೆಗೆ ಹೆಚ್ಚು ಸೂಕ್ತವಾಗಿವೆ.
ಈ ಇಯರ್‌ಬಡ್‌ಗಳು ಆ್ಯಂಬಿಯೆಂಟ್ ಸೌಂಡ್ ಮೋಡ್ ಸೌಲಭ್ಯವನ್ನೂ ಸಹ ಒಳಗೊಂಡಿವೆ. ಈ ಸೌಲಭ್ಯವು ನೀವು ನಿಮ್ಮ ಇಷ್ಟದ ಸಂಗೀತ  ಆಲಿಸುವಾಗ ನಿಮ್ಮ ಸುತ್ತಮುತ್ತಲಿನ ಸದ್ದು ಕೇಳುವುದಕ್ಕೂ ನಿಮಗೆ ಅವಕಾಶ ಒದಗಿಸುತ್ತದೆ. ನೀವು ನಡೆಯುತ್ತಿರಲಿ, ಪ್ರಯಾಣಿಸುತ್ತಿರಲಿ ಅಥವಾ ವ್ಯಾಯಾಮ ಮಾಡುತ್ತಿರಲಿ, ಆ್ಯಂಬಿಯೆಂಟ್ ಸೌಂಡ್ ಮೋಡ್ ನಿಮ್ಮ ಸಂಗೀತ ಆಲಿಸುವ ಅನುಭವಕ್ಕೆ ಅಡ್ಡಿಯಾಗದಂತೆ ನಿಮ್ಮ ಸುತ್ತಮುತ್ತಲಿನ ಪ್ರಪಂಚಕ್ಕೆ ನೀವು ಸಂಪರ್ಕದಲ್ಲಿ ಇರುವುದನ್ನು ಖಚಿತಪಡಿಸುತ್ತದೆ. “ವಾಯ್ಸ್ ಫೋಕಸ್” ಸೌಲಭ್ಯಕ್ಕೆ ಚಾಲನೆ ನೀಡುವ ಮೂಲಕ, ಸದ್ದು ನಿಗ್ರಹಿಸುವಾಗ ಡಬ್ಲ್ಯುಎಫ್‌-ಸಿ510 – ಮಾನವ ಧ್ವನಿಗಳನ್ನು ಗ್ರಹಿಸುತ್ತದೆ. ನೀವು ಸೋನಿ |  ಹೆಡ್‌ಫೋನ್ಸ್‌ ಕನೆಕ್ಟ್‌ ಆ್ಯಪ್‌ನಲ್ಲಿ ( |   ) ಧ್ವನಿ ವ್ಯವಸ್ಥೆಗಳನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಹೊಂದಿಸಬಹುದು. ಪುಟ್ಟಗಾತ್ರದ ಹೊರತಾಗಿಯೂ, ಡಬ್ಲ್ಯುಎಫ್‌-ಸಿ510  ಇಯರ್‌ಬಡ್‌ಗಳು ಡಿಜಿಟಲ್