ಪ್ರವಾದಿ ಮಹಮದ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಹಿಂಸಾಚಾರ
ನವದೆಹಲಿ:ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮದ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎಂದು ಕಾನ್ಪುರದ ಜನಪ್ರಿಯ ಮಾರುಕಟ್ಟೆ ಬಂದ್‌ ಗೆ ಮುಸ್ಲಿಮರು ಕರೆ ಕೊಟ್ಟಿದ್ದನ್ನು ವಿರೋಧಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.
ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚುವಂತೆ ಮುಸ್ಲಿಮರು ಒತ್ತಾಯಿಸಿದ್ದನ್ನು ಇತರರು ವಿರೋಧಿಸಿದ್ದು, ಆಕ್ರೋಶ ಗೊಂಡ ಕೆಲವರು ಕಲ್ಲುತೂರಾಟ ನಡೆಸಿ, ಕಚ್ಚಾ ಬಾಂಬ್‌ ಗಳನ್ನು ಎಸೆಯಲಾಯಿತು ಎಂದು ವರದಿಯಾಗಿದೆ.
ಕಲ್ಲು ತೂರಾಟದಲ್ಲಿ 13ಮಂದಿ ಪೊಲೀಸರು ಹಾಗೂ 30ಕ್ಕೂ ಹೆಚ್ಚು ಮಂದಿ ಸಾರ್ವಜನಿಕರಿಗೆ ಗಾಯಗಳಾಗಿವೆ. ಗಲಭೆಕೋರ ರನ್ನು ಚದುರಿಸಲು ಪೋಲೀಸರು ಲಾಠಿಚಾರ್ಜ್ ಮತ್ತು ಅಶ್ರು ವಾಯು ಶೆಲ್‌ಗಳನ್ನು ಸಿಡಿಸಿ ಗಲಭೆಯನ್ನು ಹತ್ತಕ್ಕುವ ಪ್ರಯತ್ನ ಮಾಡಿದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 36 ಜನರನ್ನು ಬಂಧಿಸಿದ್ದು 3 ಎಫ್‌ಐಆರ್‌ ದಾಖಲಿಸಲಾಗಿದೆ.
ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮೊಹಮದ್ದರ ವಿರುದ್ಧ ಮಾತನಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂದ್‌ ಮಾಡಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.
