  : ಪತಿ ನಿತ್ಯ ಸ್ನಾನ ಮಾಡುತ್ತಿಲ್ಲವೆಂದು ಮದುವೆಯಾದ 40 ದಿನದಲ್ಲೇ ವಿಚ್ಛೇದನ ಕೋರಿದ ಮಹಿಳೆ!
ಬೆಂಗಳೂರು:ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬರು ಮದುವೆಯಾದ ಕೇವಲ 40 ದಿನಗಳಲ್ಲೇ  ಪತಿಯಿಂದ ವಿಚ್ಛೇದನ ಕೋರಿದ್ದಾರೆ.  ಅದಕ್ಕೆ ಕಾರಣ ತನ್ನ ಪತಿ ಪ್ರತಿದಿನ ಸ್ನಾನ ಮಾಡುವುದಿಲ್… ಮಹಿಳೆಯ ಪ್ರಕಾರ  ಆಕೆಯ ಪತಿ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾನೆ. ಇದರಿಂದಾಗಿ ಆತನ ದೇಹ ವಾಸನೆ ಬರುತ್ತದೆ ( ) . ಹೀಗಾಗಿ ಜತೆಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆಗ್ರಾದಲ್ಲಿರುವ ಕುಟುಂಬ ಸಲಹಾ ಕೇಂದ್ರವನ್ನು ಸಂಪರ್ಕಿಸಿದ ಮಹಿಳೆ, ಇಂತಹ  ಅನೈರ್ಮಲ್ಯ ವ್ಯಕ್ತಿಯೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲ ಎಂದು ದೂರಿದ್ದಾರೆ. ಅಧಿಕಾರಿಗಳು ಮಹಿಳೆಯ ಪತಿಯನ್ನು ಪ್ರಶ್ನಿಸಿದಾಗ ಅವರ ಉತ್ತರವನ್ನು ಕೇಳಿ ಅವರು ಆಶ್ಚರ್ಯಚಕಿತರಾಗಿದ್ದಾರೆ. ಅವರು ಸಾಮಾನ್ಯವಾಗಿ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾರೆ.  ವಾರಕ್ಕೊಮ್ಮೆ ತಮ್ಮ ದೇಹದ ಮೇಲೆ ಸ್ವಲ್ಪ ಗಂಗಾಜಲವನ್ನು  ಸಿಂಪಡಿಸಿಕೊಳ್ಳುತ್ತಾರೆ ಎಂದು ಆಕೆ ದೂರಿದ್ದಾರೆ.
40 ದಿನಗಳ ದಾಂಪತ್ಯದಲ್ಲಿ, ಪತ್ನಿಯ ಒತ್ತಾಯದಿಂದಾಗಿ ಅವರು ಆರು ಬಾರಿ ಸ್ನಾನ ಮಾಡಿದ್ದರು ಎಂದು ಅವರು ಹೇಳಿದ್ದಾರೆ. ಮದುವೆಯಾದ ಕೆಲವು ವಾರಗಳ ನಂತರ ದಂಪತಿ ನಡುವೆ ಈ ಕಾರಣಕ್ಕೆ ಜಗಳ ಆರಂಭವಾಗಿತ್ತು. ನಂತರ ಮಹಿಳೆ ತನ್ನ ತವರು ಮನೆಗೆ ಮರಳಿದ್ದಳು ಎಂಬುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ:  : ಮಂಗಳವಾರ  ಲೆಫ್ಟಿನೆಂಟ್‌ ಗವರ್ನರ್‌ ಭೇಟಿ ಮಾಡಲಿರುವ ಕೇಜ್ರಿವಾಲ್‌; ರಾಜೀನಾಮೆ ಸಾಧ್ಯತೆ
ಕುಟುಂಬವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿ ವಿಚ್ಛೇದನ ಕೋರಿತ್ತು. ಪೊಲೀಸರ ಸಮ್ಮುಖದಲ್ಲಿ ಮಾತುಕತೆಯಾದ ಬಳಿಕ ಪ್ರತಿದಿನ ಸ್ನಾನ ಮಾಡಲು ಒಪ್ಪಿಕೊಂಡಿದ್ದ. ಆದಾಗ್ಯೂ, ಆಕೆ  ಅವನೊಂದಿಗೆ ವಾಸಿಸಲು ಇಷ್ಟಪಡಲಿಲ್ಲ.