ಒಡಿಯಾ ಕಿರುತೆರೆ ನಟಿ ರಶ್ಮಿರೇಖಾ ಓಜಾ ಶವ ಪತ್ತೆ
ಭುವನೇಶ್ವರ್:ಒಡಿಯಾ ಜನಪ್ರಿಯ ಕಿರುತೆರೆ ನಟಿ ರಶ್ಮಿರೇಖಾ ಓಜಾ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಯಾಪಲ್ಲಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತ ಸಂತೋಷ್‌ನೊಂದಿಗೆ ರಶ್ಮಿರೇಖಾ ಲಿವ್-ಇನ್ ರಿಲೇಷನ್‌ಶಿಪ್‌ ನಲ್ಲಿದ್ದರು ಎನ್ನಲಾಗಿದೆ. ಜೂ.18ರ ರಾತ್ರಿ ತನ್ನ ಬಾಡಿಗೆ ಮನೆಯ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಈ ವೇಳೆ ‘ತನ್ನ ಸಾವಿಗೆ ಯಾರೂ ಕಾರಣರಲ್ಲʼ ಎಂದು ಬರೆದಿರುವ ಚೀಟಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಅಸ್ವಾಭಾ ವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಆಕೆಯ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಪೊಲೀಸರು ಕಾಯುತ್ತಿದ್ದಾರೆ.
ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬ ಚೀಟಿ ಬಿಟ್ಟು ಸಿಕ್ಕಿರುವುದರಿಂದ ಮೇಲ್ನೋ ಟಕ್ಕೆ ಇದು ಆತ್ಮಹತ್ಯೆ ಎಂದು ತೋರು ತ್ತದೆ’ ಎಂದು ತಿಳಿಸಿದ್ದಾರೆ.
ಜಗತ್‌ಸಿಂಗ್‌ಪುರ ಜಿಲ್ಲೆಯ ರಶ್ಮಿರೇಖಾ ಓಜಾ ಅವರು ದೈನಂದಿನ ಸೋಪ್ ಕೆಮಿತಿ ಕಹಿಬಿ ಕಹಾದಲ್ಲಿನ ಪಾತ್ರದೊಂದಿಗೆ ಖ್ಯಾತಿ ಗಳಿಸಿದ್ದರು.