ಕೋವಿಡ್: 16 ಸಾವಿರದ 159 ಪ್ರಕರಣ ದಾಖಲು

ದೇಶದಲ್ಲಿ ಇದುವರೆಗೆ ಕೋವಿಡ್ -19 ವೈರಸ್ ಕಾಣಿಸಿಕೊಂಡ ನಂತರ 4 ಕೋಟಿ ಯ 29 ಲಕ್ಷದ 07 ಸಾವಿರದ 327 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 5 ಲಕ್ಷದ 25 ಸಾವಿರದ 270 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 198.20ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.