15 ಸಾವಿರದ 899 ಕೋವಿಡ್ ಸೋಂಕು ಪ್ರಕರಣ ದೃಢ
ನವದೆಹಲಿ:ಭಾರತದಲ್ಲಿ 15 ಸಾವಿರದ 899 ಹೊಸ ಕೋವಿಡ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು ಕಳೆದ 24 ಗಂಟೆಗಳಲ್ಲಿ 38 ಮಂದಿ ಮೃತಪಟ್ಟಿದ್ದಾರೆ.
ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಮೃತರ ಸಂಖ್ಯೆ ಹೆಚ್ಚಾಗಿದ್ದು ಹತ್ತು ಮಂದಿ ಹೆಚ್ಚು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾ ಲಯದ ಅಂಕಿಅಂಶದಿಂದ ತಿಳಿದುಬಂದಿದೆ.
ದೇಶದಲ್ಲಿ ಪ್ರಸ್ತುತ 1 ಲಕ್ಷದ 22 ಸಾವಿರದ 335 ಮಂದಿ ಸೋಂಕಿತರಿದ್ದು ದಿನಂಪ್ರತಿ ಕೋವಿಡ್ ಸೋಂಕಿತರ ಪ್ರಮಾಣ ಶೇ.4.96ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 15 ಸಾವಿರದ 899 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 4 ಕೋಟಿಯ 29 ಲಕ್ಷದ 37 ಸಾವಿರದ 876 ಮಂದಿ ಗುಣಮುಖ ಹೊಂದಿ ಬಿಡುಗಡೆಯಾಗಿದ್ದು, ದೇಶದಲ್ಲಿ ಇದುವರೆಗೆ 5 ಲಕ್ಷದ 25 ಸಾವಿರದ 343 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 3 ಲಕ್ಷದ 79 ಸಾವಿರದ 470 ಮಂದಿಗೆ ಪರೀಕ್ಷೆ ಮಾಡುವ ಮೂಲಕ 86.57 ಕೋಟಿ ಒಟ್ಟು ಕರೋನಾ ಪರೀಕ್ಷೆ ನಡೆಸಲಾಗಿದೆ. ಇಲ್ಲಿಯವರೆಗೆ 198.51 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.