ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್’ಗೆ ಕೋವಿಡ್​ ದೃಢ
ಕೋಲ್ಕತ:ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​ ಅವರಿಗೆ ಕೋವಿಡ್​ ದೃಢಪಟ್ಟಿದೆ. ಸೇನ್​ಗೆ ಕೋವಿಡ್​ ಸೌಮ್ಯ ರೋಗಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗು ತ್ತಿದೆ.
ಜುಲೈ 1 ರಂದು ಶಾಂತಿನಿಕೇತನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿ ಅಲ್ಲಿಯೇ ತಂಗಿ ದ್ದರು. 88 ವರ್ಷದ ಸೇನ್​ ಅವರಿಗೆ ಸೋಂಕು ತಗುಲಿದೆ ಎಂದು ತಡವಾಗಿ ವರದಿಯಾಗಿದೆ.
ಸೇನ್​ ಅವರು ತಮ್ಮ ನಿವಾಸದಿಂದಲೇ ಕೋಲ್ಕತ್ತಾದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ವರ್ಜುವಲ್​ ಆಗಿ ಪಾಲ್ಗೊಳ್ಳ ಬೇಕಿತ್ತು. ಸೇನ್ ಜು.10 ರಂದು ಲಂಡನ್‌ಗೆ ತೆರಳಬೇಕಾಗಿತ್ತು. ವೈದ್ಯರು ನಿತ್ಯ ಅವರ ಮನೆಗೆ ಭೇಟಿ ನೀಡುತ್ತಿದ್ದು, ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.