ಜುಬೈರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ನವದೆಹಲಿ:ದೆಹಲಿ ನ್ಯಾಯಾಲಯವು ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿದೆ.
2018ರಲ್ಲಿ ಹಿಂದೂ ಧಾರ್ಮಿಕ ಭಾವನಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಆರೋಪದ ಮೇಲೆ ಇತ್ತೀಚೆಗೆ ಜುಬೈರ್‌ ಅವರನ್ನು ಬಂಧಿಸಲಾಗಿದೆ.
ಜುಬೈರ್‌ ಪ್ರಕರಣ ಸಂಬಂಧ ವಿಸ್ತೃತ ವಾದಕ್ಕೆ ಕಾಲಾವಕಾಶ ಕೋರಿ ತನಿಖಾಧಿಕಾರಿ ಮಾಡಿದ ಮನವಿಯನ್ನು ಪರಿಗಣಿಸಿ, ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ದೇವೇಂದರ್ ಕುಮಾರ್‌ ಜಂಗಾಲ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.