ಖಾಸಗಿ ವಾಹಿನಿ ಮುಖ್ಯಸ್ಥ ಅರೂಪ್ ಚಟರ್ಜಿ ಬಂಧನ
ರಾಂಚಿ:ಬ್ಲ್ಯಾಕ್‌ಮೇಲ್ ಆರೋಪದ ಮೇಲೆ ಖಾಸಗಿ ವಾಹಿನಿ ಮುಖ್ಯಸ್ಥ ಅರೂಪ್ ಚಟರ್ಜಿಯನ್ನು ಧನ್‌ಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಉದ್ಯಮಿ ರಾಕೇಶ್ ಕುಮಾರ್ ಅವರು ಜೂನ್ 27ರಂದು ಅರೂಪ್ ಚಟರ್ಜಿ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಟರ್ಜಿ ಅವರನ್ನು ಬಂಧಿಸಿರುವ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ‘ಆಲ್ಟ್‌ನ್ಯೂಸ್‌’ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು.