ವಾಯುಪಡೆಯ ಸಣ್ಣ ತರಬೇತಿ ವಿಮಾನ ಪತನ
ನವದೆಹಲಿ:ಭಾರತೀಯ ವಾಯುಪಡೆಯ ಸಣ್ಣ ತರಬೇತಿ ವಿಮಾನ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಪತನಗೊಂಡಿದೆ.
ವಿಮಾನ ಪತನದಿಂದಾಗಿ ತರಬೇತಿಯಲ್ಲಿದ್ದ ಪೈಲೆಟ್ ಸಣ್ಣಪುಟ್ಟ ಗಾಯದಿಂದ ಪಾರಾಗಿರುವುದು ವರದಿ ಯಾಗಿದೆ. ಗಾಯಗೊಂಡ ಪೈಲೆಟ್ ಅನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.