16 ಸಾವಿರದ 561 ಹೊಸ ಕೋವಿಡ್ ಕೇಸು ದೃಢ
ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16 ಸಾವಿರದ 561 ಹೊಸ ಕೋವಿಡ್ ಕೇಸುಗಳು ವರದಿಯಾಗಿದ್ದು 18 ಸಾವಿರದ 053 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದಾರೆ.
ದೇಶದಲ್ಲಿ 1 ಲಕ್ಷದ 23 ಸಾವಿರದ 535 ಸಕ್ರಿಯ ಪ್ರಕರಣಗಳಿದ್ದು ದಿನಂಪ್ರತಿ ಕೋವಿಡ್ ಪಾಸಿಟಿವ್ ದರ ಶೇಕಡಾ 5.44ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ.
ಒಟ್ಟಾರೆ ಸೋಂಕಿನಿಂದ ಗುಣಮುಖರಾಗಿ 4 ಕೋಟಿಯ 35 ಲಕ್ಷದ 73 ಸಾವಿರದ 094 ಮಂದಿ ಬಿಡುಗಡೆಗೊಂಡಿದ್ದಾರೆ. ಸೋಂಕಿಗೆ ದೇಶದಲ್ಲಿ 5 ಲಕ್ಷದ 26 ಸಾವಿರದ 928 ಮಂದಿ ಬಲಿಯಾಗಿದ್ದಾರೆ.
ಲಸಿಕೆ ಆರಂಭವಾದ ನಂತರ ಒಟ್ಟಾರೆಯಾಗಿ 207.47 ಕೋಟಿ ಲಸಿಕೆ ಡೋಸ್ ವಿತರಿಸ ಲಾಗಿದೆ. ಕಳೆದ 24 ಗಂಟೆಗಳಲ್ಲಿ 17,72,441 ಡೋಸ್ ಗಳನ್ನು ಕಳೆದ 24 ಗಂಟೆಗಳಲ್ಲಿ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 3,04,189 ಲಕ್ಷ ಪರೀಕ್ಷೆ ನಡೆಸಲಾಗಿದ್ದು ಇದುವರೆಗೆ 87.95 ಕೋಟಿ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.