15,815 ಹೊಸ ಕೋವಿಡ್ ಪ್ರಕರಣ ಪತ್ತೆ
ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 15,815 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿ ಯಲ್ಲಿ 68 ಜನರು ಮೃತಪಟ್ದಿದ್ದಾರೆ. ಈ ಪೈಕಿ ಕೇರಳದಲ್ಲೇ 24 ಜನರು ಮೃತಪಟ್ಟಿದ್ದಾರೆ.
ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಸದ್ಯ 1,19,264 ಪ್ರಕರಣಗಳಿವೆ. ಒಟ್ಟು ಸೊಂಕು ಪ್ರಕರಣಗಳ ಪೈಕಿ ಶೇ 0.27ರಷ್ಟು ಸಕ್ರಿಯ ಪ್ರಕರಣ ಗಳಿವೆ.
ಒಟ್ಟು ಸೋಂಕು ಪ್ರಕರಣಗಳು 4,42,39,372ಕ್ಕೆ ಏರಿಕೆಯಾಗಿದೆ. ಈವರೆಗೆ 5,26,996 ಜನರು ಸಾವಿಗೀಡಾಗಿದ್ದಾರೆ. 4,35,93,112 ಜನರು ಸೋಂಕಿನಿಂದ ಚೇತರಿಸಿಕೊಂಡಿರುವು ದಾಗಿ ಅಂಕಿಅಂಶಗಳಿಂದ ತಿಳಿದುಬಂದಿದೆ.
ದೇಶದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದ ಅಂಗವಾಗಿ ಈವರೆಗೆ ದೇಶದಲ್ಲಿ 207.71 ಕೋಟಿ ಕೋವಿಡ್ ವಿರುದ್ಧದ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದೆ.