ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ
ಶ್ರೀನಗರ:ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರವನ್ನು ದೇಶದ ಇತರೆ ಭಾಗಗಳಿಗೆ ಸಂಪರ್ಕಿಸುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಶನಿವಾರ ಉದ್ಘಾಟಿಸಲಾಗಿದೆ.
ಒಂದೇ ಒಂದು ಕಮಾನಿನ ಮೇಲೆ 359 ಮೀ. ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಚೀನಾದ ಗಿಝೌ ಪ್ರಾಂತ್ಯದ ಬೆಪಾಂಜಿಯಾಂಗ್‌ ನದಿಯ ಮೇಲೆ 275 ಮೀಟರ್‌ ಎತ್ತರದಲ್ಲಿ ನಿರ್ಮಿಸಿದ ಸೇತುವೆಗೆ ಅತ್ಯಂತ ಎತ್ತರದ ಸೇತುವೆಯೆಂಬ ಹೆಗ್ಗಳಿಕೆಯಿತ್ತು.
ಚೆನಾಬ್‌ ನದಿಯ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಒಂದೇ ಒಂದು ಕಮಾನಿನ ಮೇಲೆ 1.35 ಕಿ.ಮೀ. ಉದ್ದದ ಸೇತುವೆ ಸಿದ್ಧವಾಗಿದೆ. 28,000 ಕೋಟಿ ರೂ. ವೆಚ್ಚದಲ್ಲಿ ಮುಂಬೈ ಮೂಲದ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಆಫ್ಕಾನ್ಸ್‌ ಇದನ್ನು ನಿರ್ಮಿಸಿದೆ. ಉಧಾಂಪುರ-ಶ್ರೀನಗರ-ಬಾರಾಮುಲ್ಲ ರೈಲುಮಾರ್ಗವನ್ನು ಬೆಸೆಯಬಹುದು.