ಮದ್ರಾಸ್ ಹೈಕೋರ್ಟ್’ನಲ್ಲಿ ಓ.ಪನ್ನೀರ್ ಸೆಲ್ವಂಗೆ ಬಿಗ್ ರಿಲೀಫ್
ಚೆನ್ನೈ:ಜುಲೈ 11ರಂದು ಚೆನ್ನೈನಲ್ಲಿ ನಡೆದಿದ್ದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಓ. ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿತ್ತು.
ಇದರ ವಿರುದ್ದ ಓ. ಪನ್ನೀರ್ ಸೆಲ್ವಂ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಅವರಿಗೆ ಈಗ ಬಿಗ್ ರಿಲೀಫ್ ಸಿಕ್ಕಿದೆ.
ಸಾಮಾನ್ಯ ಸಭೆಯಲ್ಲಿ ಬೈಲಾ ಉಲ್ಲಂಘನೆ ಕುರಿತಂತೆ ನ್ಯಾಯಾಲಯದಲ್ಲಿ ಓ. ಪನ್ನೀರ್ ಸೆಲ್ವಂ ಪ್ರಶ್ನಿಸಿದ್ದರು. ಇದೀಗ ಹೊಸದಾಗಿ ಸಾಮಾನ್ಯ ಸಭೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಓ. ಪನ್ನೀರ್ ಸೆಲ್ವಂ ಅವರ ನಿವಾಸದ ಮುಂದೆ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ.