9,531 ಹೊಸ ಕರೋನಾ ಪ್ರಕರಣ ಪತ್ತೆ
ನವದೆಹಲಿ:ದೇಶದಲ್ಲಿ ಕರೋನಾ ಏರಿಳಿತ ಕಾಣುತ್ತಿದೆ. ಇದೀಗ ಕಳೆದ 24 ಗಂಟೆಗಳಲ್ಲಿ 9,531 ಹೊಸ ಪ್ರಕರಣಗಳು ಪತ್ತೆಯಾಗಿದೆ. ಆದರೆ ಸಾವಿನ ಸಂಖ್ಯೆ 5,27,368ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಭಾನುವಾರ 11,539 ಪ್ರಕರಣಗಳು ವರದಿಯಾದ ಒಂದು ದಿನದ ನಂತರ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 97,648 ಕ್ಕೆ ಇಳಿದಿದೆ. ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 5,27,368ಕ್ಕೆ ಏರಿಕೆ ಯಾಗಿದ್ದು, ಕೇರಳದಲ್ಲಿ 10 ಸಾವುಗಳು ಸೇರಿದಂತೆ ಇನ್ನೂ 26 ಸಾವುಗಳು ಸಂಭವಿಸಿವೆ.
