ಹರಿದ ಕರೆನ್ಸಿ ಸ್ವೀಕರಿಸಲು ನಿರಾಕರಿಸಿದ ಡೆಲಿವರಿ ಬಾಯ್‌’ಗೆ ಶೂಟ್‌
ಉತ್ತರಪ್ರದೇಶ:ಹರಿದ 200 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಪಿಜ್ಜಾ ಡೆಲಿವರಿ ಬಾಯ್‌ನ ಮೇಲೆ ಇಬ್ಬರುವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.
ಶಹಜಹಾನ್‌ಪುರದಲ್ಲಿ ಘಟನೆ ನಡೆದಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಡೆಲಿವರಿ ಬಾಯ್‌ ಸಚಿನ್ ಕಶ್ಯಪ್ ಸ್ಥಿತಿ ಗಂಭೀರವಾಗಿದ್ದು, ಬರೇಲಿಯ ವಿಶೇಷ ವೈದ್ಯ ಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‌ಆರೋಪಿಗಳಿಂದ ಕಂಟ್ರಿ ನಿರ್ಮಿತ ಪಿಸ್ತೂಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸದರ್ ಬಜಾರ್‌ನ ಎಸ್‌ಎಚ್‌ಒ ಅಮಿತ್ ತಿಳಿಸಿದ್ದಾರೆ.
ಸಹೋದರರಾದ ಆರೋಪಿಗಳು ಫೋನ್ ಮೂಲಕ ಪಿಜ್ಜಾವನ್ನು ಆರ್ಡರ್ ಮಾಡಿದ್ದಾರೆ. ಸಚಿನ್ ತನ್ನ ಸಹೋದ್ಯೋಗಿ ಯೊಂದಿಗೆ ಆರೋಪಿಯ ಸ್ಥಳಕ್ಕೆ ತಲುಪಿ ಪಿಜ್ಜಾ ವಿತರಿಸಿ ದ್ದಾನೆ. ಆರೋಪಿ ನದೀಂ ನೀಡಿದ ಹಣದಲ್ಲಿ ಸಚಿನ್ ಮತ್ತು ಆತನ ಸಹಚರ ತಂಪು ಪಾನೀಯ ಖರೀದಿಸಲು ತೆರಳಿದ್ದರು.
ಆದರೆ, ನೋಟು ಹರಿದಿದ್ದರಿಂದ ಅದನ್ನು ಸ್ವೀಕರಿಸಲು ಅಂಗಡಿಯವರು ನಿರಾಕರಿಸಿದ್ದಾರೆ. ನಂತರ ಸಚಿನ್ ನದೀಂ ಬಾಗಿಲು ತಟ್ಟಿ ಹೊರಗೆ ಕರೆದು ನೋಟು ಬದಲಿಸುವಂತೆ ಕೇಳಿದರು. ಇದರಿಂದ ಕುಪಿತಗೊಂಡ ನದೀಂ ಸಚಿನ್ ಮೇಲೆ ದೌರ್ಜನ್ಯ ಎಸಗಿದ್ದಾನೆ. ನಂತರ, ನದೀಂನ ಸಹೋದರ ಹೊರಗೆ ಬಂದು ಮತ್ತೆ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ವರದಿ ತಿಳಿಸಿದೆ.