ಆ.28ರಂದು  ಅಡ್ವಾನ್ಸ್ಡ್ ಪರೀಕ್ಷೆ
ನವದೆಹಲಿ : ಅಡ್ವಾನ್ಸ್ಡ್ 2022 ಪರೀಕ್ಷೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಪರೀಕ್ಷೆಯನ್ನ ಪೂರ್ವನಿರ್ಧರಿತ ವೇಳಾಪಟ್ಟಿ ಅಂದರೆ ಆ.28ರಂದು ನಡೆಸಲಾಗುತ್ತದೆ. ಶುಕ್ರವಾರ ಸುಪ್ರೀಂಕೋರ್ಟ್ ಈ ವಿಷಯದಲ್ಲಿ ತನ್ನ ತೀರ್ಪು ನೀಡಿದೆ.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಎರಡನೇ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸ ಲಾಗಿತ್ತು. ಅರ್ಜಿದಾರರು ತಾಂತ್ರಿಕ ತೊಂದರೆ ಗಳಿಂದಾಗಿ ಜೆಇಇ ಮೇನ್ಸ್ 2022 ಪರೀಕ್ಷೆಯಲ್ಲಿ 50 ಪ್ರಶ್ನೆಗಳನ್ನ ಪ್ರಯತ್ನಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಈ ದೋಷವು ಅಭ್ಯರ್ಥಿಯ ತಪ್ಪಲ್ಲ. ಆದರೆ, ಕೇಂದ್ರದ ಸಮಸ್ಯೆಗಳ ಹೊರೆಯನ್ನ ವಿದ್ಯಾರ್ಥಿಯೇ ಹೊರಬೇಕಾಯಿತು. ಹೀಗಾಗಿ ಅಭ್ಯರ್ಥಿಗೆ ಇನ್ನೂ ಒಂದು ಅವಕಾಶ ಸಿಗಬೇಕು, ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗಿದೆ ಎಂದು ವಾದಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ಅರ್ಜಿಯನ್ನ ತಿರಸ್ಕರಿ ಸಿದೆ.
ಪರೀಕ್ಷೆಯಲ್ಲಿ ಹೆಚ್ಚು ಸಂಕೀರ್ಣತೆ ಸೃಷ್ಟಿಸಲು ನಾವು ಬಯಸುವುದಿಲ್ಲ ಎಂದಿದೆ.   2022 ಅಡ್ವಾನ್ಸ್ಡ್ ಪರೀಕ್ಷೆಯು ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಂದಿದೆ.
ಜೆಇಇ ಮುಖ್ಯ ಪರೀಕ್ಷೆಗೆ ಲಕ್ಷಾಂತರ ಮಂದಿ ನೀಡಿದ್ದು, ಹಲವು ಕೇಂದ್ರಗಳಲ್ಲಿ ತಾಂತ್ರಿಕ ಕೊರತೆ ಎದುರಾಗಿ ಈ ವರ್ಷ ಜೆಇಇ ಮುಖ್ಯ ಪರೀಕ್ಷೆಯನ್ನ ಎರಡು ಅವಧಿಗಳಲ್ಲಿ ನಡೆಸಲಾಯಿತು. ಜೆಇಇ ಮುಖ್ಯ ಪರೀಕ್ಷೆಯನ್ನ ಎನ್‌ಟಿಎ ನಡೆಸಿದ್ದು, ಸುಮಾರು 9 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಜೆಇಇ ಮೇನ್ಸ್ ಫಲಿತಾಂಶ ಕೂಡ ಬಂದಿದೆ. ಟಾಪ್ 2.6 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದಿದ್ದಾರೆ.