ಗಣಪತಿ ಹಬ್ಬಕ್ಕಾಗಿ 316.40 ಕೋಟಿ ರೂ. ವಿಮಾ ರಕ್ಷಣೆ..!
ಮುಂಬೈ:ಮುಂಬೈನ ಮಾಟುಂಗಾದಲ್ಲಿರುವ ಗಣೇಶ ಮಂಡಲಗಳಲ್ಲಿ ಒಂದಾದ ಜಿಎಸ್‌ಬಿ ಸೇವಾ ಮಂಡಲ್ ಮುಂಬರುವ ಗಣಪತಿ ಹಬ್ಬಕ್ಕಾಗಿ 316.40 ಕೋಟಿ ರೂ. ವಿಮಾ ರಕ್ಷಣೆ ತೆಗೆದುಕೊಂಡಿದೆ.
ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ವಿಜಯ್ ಕಾಮತ್ ಪ್ರಕಾರ, ‘ಎಲ್ಲಾ ಸಾರ್ವಜನಿಕ ಹೊಣೆಗಾರಿಕೆಗಳು ಮತ್ತು ಮಂಡಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರು ಬುಧವಾರದಿಂದ ಪ್ರಾರಂಭವಾಗುವ 10 ದಿನಗಳ ಉತ್ಸವಗಳಿಗೆ ವಿಮೆಯ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದಿದ್ದಾರೆ.
ಮಂಡಲದ ಪ್ರತಿನಿಧಿಯೊಬ್ಬರು ಇದು ಮಂಡಲದಿಂದ ಪಡೆದ ಅತ್ಯಧಿಕ ವಿಮಾ ರಕ್ಷಣೆ ಎಂದು ಹೇಳಿಕೊಂಡಿದ್ದಾರೆ.
316.4 ಕೋಟಿ ರೂ. ಮೌಲ್ಯದ ವಿಮೆಯು ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳಿಗೆ 31.97 ಕೋಟಿ ರೂ. ಮತ್ತು ಪಂಂಡಲ್, ಸ್ವಯಂಸೇವಕರು, ಅರ್ಚಕರು, ಅಡುಗೆಯವರು, ಪಾದರಕ್ಷೆಗಳ ಸ್ಟಾಲ್ ಕೆಲಸಗಾರರು, ವ್ಯಾಲೆಟ್ ಪಾರ್ಕಿಂಗ್ ವ್ಯಕ್ತಿಗಳು ಮತ್ತು ಭದ್ರತಾ ಸಿಬ್ಬಂದಿಗೆ 263 ಕೋಟಿ ರೂ. ವೈಯಕ್ತಿಕ ವಿಮಾ ರಕ್ಷಣೆಯನ್ನು ಒಳಗೊಂಡಿದೆ.
 ಸೇವಾ ಮಂಡಲ್ ತನ್ನ 68 ನೇ ವರ್ಷದ ಗಣಪತಿ ಹಬ್ಬವನ್ನು ಆಚರಿಸುತ್ತಿದೆ.