ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
ನವದೆಹಲಿ:ಸಫ್ದರ್‍ಜಂಗ್ ಆಸ್ಪತ್ರೆಯ ಅಂತಿಮ ವರ್ಷದ ವಿದ್ಯಾರ್ಥಿನಿ ಯೊಬ್ಬಳು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೆಹಲಿಯ ನಿವಾಸಿ ವಿದ್ಯಾರ್ಥಿನಿ ಸಫ್ದರ್‍ಜಂಗ್ ಆಸ್ಪತ್ರೆಯ ಎಂಬಿಬಿಎಸ್ ಬಾಲಕಿಯರ ಹಾಸ್ಟೆಲ್‍ನಲ್ಲಿದ್ದುಕೊಂಡು ಎಂಬಿಬಿಸ್ ಇಂಟರ್ನ್‍ಶಿಪ್ ಮಾಡುತ್ತಿದ್ದರು. ಗುರುವಾರ ಹಾಸ್ಟೆಲ್‍ನ ಕೊಠಡಿಯಲ್ಲಿ ಸ್ಕಾರ್ಫ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಮನೋಜ್ ಸಿ. ತಿಳಿಸಿದ್ದಾರೆ.
ಕೋಣೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಆಕೆಯ ಸ್ನೇಹಿತರು ಬಲವಂತ ವಾಗಿ ತೆರೆದರು .ವಿದ್ಯಾರ್ಥಿನಿಯನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಕ್ಕೆ ಕರೆದೊಯ್ದರು, ಅಲ್ಲಿಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.
ಕೊಠಡಿಯೊಳಗೆ ಖಿನ್ನತೆ-ಶಮನಕಾರಿ ಔಷಧದ ಎರಡು ಖಾಲಿ ಪ್ಯಾಕೆಟ್ಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.ಮೃತರ ಕುಟುಂಬಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.