ವಿಶ್ವಾಸ ಮತ ಗೆದ್ದ ಜಾರ್ಖಂಡ್ ಸಿಎಂ
ಜಾರ್ಖಂಡ್ :ರಾಜಕೀಯ ಬಿಕ್ಕಟ್ಟಿನ ನಡುವೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ.
ಜೆಎಂಎಂ ನೇತೃತ್ವದ ಯುಪಿಎ ಮೈತ್ರಿಕೂಟದ ಯಾವುದೇ ಶಾಸಕರು ಆಡಳಿ ತಾರೂಢ ಸರ್ಕಾರದ ವಿರುದ್ಧ ಮತ ಚಲಾಯಿಸಲಿಲ್ಲ. ಸೋರೆನ್ ವಿಶ್ವಾಸ ಮತ ಗೆದ್ದ ಬಳಿಕ ಪ್ರತಿಪಕ್ಷ ಬಿಜೆಪಿ ಜಾರ್ಖಂಡ್ ಶಾಸಕಾಂಗದಿಂದ ಹೊರ ನಡೆದಿದೆ.
ಸೊರೆನ್ ಮಂಡಿಸಿದ ವಿಶ್ವಾಸಮತ ಯಾಚನೆಯ ಪರವಾಗಿ 48 ಮತಗಳು ಬಂದಿದ್ದು, ವಿಪಕ್ಷದಲ್ಲಿ ಶೂನ್ಯ ಮತಗಳು ಬಿದ್ದವು.