ನದಿಯಲ್ಲಿ ದೋಣಿ ಮುಳುಗಿ 10 ಜನರು ನಾಪತ್ತೆ
ಪಾಟ್ನಾ:ಗಂಗಾ ನದಿಯಲ್ಲಿ ದೋಣಿ ಮುಳುಗಿದ ಅಘಾತಕಾರಿ ಘಟನೆ ಸೋಮವಾರ ಬಿಹಾರದ ಪಾಟ್ನಾ ಸಮೀಪದ ದಾನಾಪುರದ ಶಾಪುರ್ ಪಿಎಸ್ ಪ್ರದೇಶದ ಬಳಿ ಸಂಭವಿಸಿದೆ.
ದೋಣಿಯಲ್ಲಿ ಸುಮಾರು 50-54 ಜನರು ಇದ್ದರು ಅವರಲ್ಲಿ ಸುಮಾರು 10 ಜನರು ನಾಪತ್ತೆಯಾಗಿದ್ದಾರೆ.
ದೋಣಿಯಲ್ಲಿದ್ದ ವ್ಯಕ್ತಿಗಳು ಪಾಟ್ನಾದ ದೌದ್‌ಪುರ ಪ್ರದೇಶದಿಂದ ಬಂದವರು. ಇಲ್ಲಿನ ಕಾರ್ಮಿಕರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರಕ್ಷಣೆಗಾಗಿ ಎರಡು ದೋಣಿಗಳನ್ನು ಕಳುಹಿಸಲಾಗಿದೆ. ದೋಣಿ ಮುಳುಗಿದ ಸುದ್ದಿ ಹರಡಿದ ಕೂಡಲೇ ಜನರು ನದಿಯ ಸುತ್ತಲೂ ಜಮಾಯಿಸಿದರು. ಮುಳುಗುಗಾರರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.