 : ನವೀಕರಿಸಬಹುದಾದ ಇಂಧನ; 32.45 ಲಕ್ಷ ಕೋಟಿ ರೂ. ಜಾಗತಿಕ ಹೂಡಿಕೆ ಸೆಳೆದ ಭಾರತ
ನವದೆಹಲಿ:ನವೀಕರಿಸಬಹುದಾದ ಇಂಧನ ( ) ಕ್ಷೇತ್ರದಲ್ಲಿ ಭಾರತ ಈಗ 32.45 ಲಕ್ಷ ಕೋಟಿ ರೂ. ಹೂಡಿಕೆಯನ್ನು ಸೆಳೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ( ) ತಿಳಿಸಿದರು. ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ 4ನೇ ಜಾಗತಿಕ ಸಭೆ ಮತ್ತು ಎಕ್ಸ್‌ಪೊ () ಮುಕ್ತಾಯ ಸಮಾವೇಶದಲ್ಲಿ ಮಾತನಾಡಿ, ಮೂರು ದಿನಗಳ ಈ ಐತಿಹಾಸಿಕ ಸಮಾವೇಶಕ್ಕೆ 40000 ಹೂಡಿಕೆದಾರರು ಸಾಕ್ಷಿಯಾದರು ಎಂದು ಹೇಳಿದರು.
ಹಸಿರು ಇಂಧನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕಾಗಿ ಗಣನೀಯ ಹೂಡಿಕೆ ಮಾಡಲು ಎಲ್ಲಾ ಪಾಲುದಾರರು ಮುಂದಾಗಿದ್ದಾರೆ. 2030ರ ವೇಳೆಗೆ ಶಪತ್ ಪಾತ್ರದ ರೂಪದಲ್ಲಿ 32.45 ಲಕ್ಷ ಕೋಟಿ ಮೌಲ್ಯದ ದಾಖಲೆಯ ಹೂಡಿಕೆಗೆ ವಾಗ್ದಾನವಾಗಿದೆ ಎಂದು ಅವರು ತಿಳಿಸಿದರು.
ಡೆವಲಪರ್‌ಗಳು ಹೆಚ್ಚುವರಿ 570 , ತಯಾರಕರು ಸೌರ ಘಟಕಗಳಲ್ಲಿ 340 , ಸೌರ ಕೋಶಗಳಲ್ಲಿ 240 , ವಿಂಡ್ ಟರ್ಬೈನ್‌ಗಳಲ್ಲಿ 22  ಮತ್ತು ಎಲೆಕ್ಟ್ರೋಲೈಸರ್‌ಗಳಲ್ಲಿ 10  ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ತೋರಿದ್ದಾರೆ ಎಂದರು.
ನವೀಕರಿಸಬಹುದಾದ ಇಂಧನ ಶಕ್ತಿಯು ಆರ್ಥಿಕತೆಗೆ ಪ್ರೇರಕ ಶಕ್ತಿಯಾಗಿದೆ ಎಂದ ಸಚಿವರು, ಭಾರತ ಜಾಗತಿಕವಾಗಿ, ವಿಶೇಷವಾಗಿ ರಿನಿವೆಬಲ್ ಎನರ್ಜಿ ವಲಯದಲ್ಲಿ ನಂಬಿಕೆಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.
ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಹಾದಿಯಲ್ಲಿರುವ ಭಾರತವನ್ನು ಜಗತ್ತೇ ಎದಿರು ನೋಡುತ್ತಿದೆ. ಭಾರತ ಈಗ 500  ಹಸಿರು ಇಂಧನ ಉತ್ಪಾದನಾ ಗುರಿಯತ್ತ ಹೆಚ್ಚು ಗಮನಹರಿಸಿದೆ ಎಂದು ಸಚಿವ ಜೋಶಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ |  : ಮೊದಲ ಟೆಸ್ಟ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡದ ವರದಿ ಹೀಗಿದೆ
 ಗಿಫ್ಟ್ ಸಿಟಿಯಲ್ಲಿ “ ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್  ” ಎಂಬ ಹೊಸ ಅಂಗಸಂಸ್ಥೆಯನ್ನು ಸಂಯೋಜಿಸಿದೆ ಎಂದು ತಿಳಿಸಿದರು. ಸಮಾರೋಪದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಖರ್ ಮಾತನಾಡಿ, ಜಗತ್ತಿನ ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನದ ಅಗತ್ಯವನ್ನು ಪ್ರತಿಪಾದಿಸಿದರು. ಹಸಿರು ಇಂಧನ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಭಾರತ ದೃಢವಾದ ಬದ್ಧತೆ ತೋರುತ್ತಿದ್ದು, ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | : ಇಸ್ರೋಗೆ ಕೇಂದ್ರದಿಂದ ಗುಡ್‌ನ್ಯೂಸ್;‌ ಚಂದ್ರಯಾನ-4 ಸೇರಿದಂತೆ ಹಲವು ಯೋಜನೆಗಳಿಗೆ ಅಸ್ತು
ಈ ಸಂದರ್ಭದಲ್ಲಿ ಗುಜರಾತ್ ಗವರ್ನರ್ ಆಚಾರ್ಯ ದೇವವ್ರತ್, ಪಂಜಾಬ್‌ ಗವರ್ನರ್ ಗುಲಾಬ್ ಚಂದ್ ಕಟಾರಿಯಾ, ಗುಜರಾತ್ ಸಿಎಂ ಭೂಪೇಂದ್ರಭಾಯಿ ಪಟೇಲ್ ಹಾಗೂ ಸಮಾವೇಶದ ಪಾಲುದಾರ ರಾಜ್ಯಗಳು ಮತ್ತು ದೇಶಗಳು, ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.