4.12 ಕೆ.ಜಿ ಅಕ್ರಮವಾಗಿ ತಿಮಿಂಗಿಲ ವಾಂತಿ ಸಾಗಾಟ: ನಾಲ್ವರ ಬಂಧನ
ಲಕ್ನೋ :ಅಕ್ರಮವಾಗಿ ತಿಮಿಂಗಿಲ ವಾಂತಿಯನ್ನುಸಾಗಿಸುತ್ತಿದ್ದ ತಂಡದ ಮೇಲೆ ಉತ್ತರ ಪ್ರದೇಶದ ವಿಶೇಷ ಪೊಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆದು 4.12 ಕೆ.ಜಿ ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರಪ್ರದೇಶದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ಹತ್ತು ಕೋಟಿ ಮೌಲ್ಯದ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದಿದ್ದಾರೆ.
1972 ರ ವನ್ಯಜೀವಿ (ರಕ್ಷಣೆ) ಕಾಯಿದೆ ಪ್ರಕಾರ ತಿಮಿಂಗಿಲ ವಾಂತಿ ಮಾರಾಟ ನಿಷೇದಿಸ ಲಾಗಿದೆ. ಆದರೂ ಪೋಲೀಸರ ಕಣ್ಣು ತಪ್ಪಿಸಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸು ತ್ತಿದ್ದಾರೆ.
ಈ ವರ್ಷ ಅಕ್ರಮವಾಗಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ ) ಮಾರಾಟ ಮಾಡುತ್ತಿದ್ದ ಹಲವರನ್ನು ವಶಕ್ಕೆ ತೆಗೆದುಕೊಳ್ಳ ಲಾಗಿದೆ.
ಕಳೆದ ಜುಲೈನಲ್ಲಿ, ಕೇರಳದಲ್ಲಿ 28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.