ಹಣದುಬ್ಬರ ತಗ್ಗಿಸುವಲ್ಲಿ ರಾಜ್ಯಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ: ನಿರ್ಮಲಾ ಸೀತಾರಾಮನ್
ನವದೆಹಲಿ:ಹಣದುಬ್ಬರ ತಗ್ಗಿಸುವಲ್ಲಿ ಕೇಂದ್ರದ್ದು ಮಾತ್ರವಲ್ಲ, ಬೆಲೆಗಳ ನಿರ್ವಹಣೆಯಲ್ಲಿ ರಾಜ್ಯಗಳು ನಿರ್ಣಾಯಕಪಾತ್ರವನ್ನು ವಹಿಸುತ್ತವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
 ಆಯೋಜಿಸಿದ್ದ ಹಣದುಬ್ಬರವನ್ನು ನಿಯಂತ್ರಿಸುವ ಕುರಿತು ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ “ಹಣದುಬ್ಬರ ನಿರ್ವಹಣೆಯನ್ನು ಕೇಂದ್ರ ಮತ್ತು ರಾಜ್ಯಗಳೆರಡರ ಸಾಮೂಹಿಕ ಜವಾಬ್ದಾರಿ” ಎಂದಿದ್ದಾರೆ.
ಕೇಂದ್ರವು ಎರಡು ಬಾರಿ ಇಂಧನದ ಮೇಲಿನ ತೆರಿಗೆ ಇಳಿಸಿ ಆ ಮೂಲಕ ಬೆಲೆಗಳನ್ನು ಕಡಿಮೆ ಮಾಡಿದೆ. ಆದರೆ ಅದನ್ನು ಅನುಸರಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ. ಕೆಲವು ರಾಜ್ಯಗಳಲ್ಲಿ ಹಣದುಬ್ಬರ ಮಟ್ಟವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ. ಆ ರಾಜ್ಯಗಳು ಇಂಧನ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತ ಗೊಳಿಸಿಲ್ಲ, ಇದು ಹಣದುಬ್ಬರವನ್ನು ಹೆಚ್ಚಿಸುತ್ತದೆ” ಎಂದು ಉಲ್ಲೇಖಿಸಿದ್ದಾರೆ.
ಜಾಗತೀಕರಣದಿಂದಾಗಿ ಹಣದುಬ್ಬರದ ಪ್ರಭಾವ ಹರಡುತ್ತದೆ ಮತ್ತು ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳು ಅದನ್ನು ಪಳಗಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ರಷ್ಯಾದಿಂದ ಅಗ್ಗದ ತೈಲ ಖರಿದಿಸುವುದೂ ಕೂಡ ಈ ಕಾರ್ಯತಂತ್ರದ ಭಾಗವಾಗಿದೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ.