  ಪರೀಕ್ಷೆ ಫಲಿತಾಂಶ ಬಿಡುಗಡೆ
ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಪದವಿಪೂರ್ವ 2022 ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ   ವೆಬ್‌ಸೈಟ್ ... ನಲ್ಲಿ ಡೌನ್‌ಲೋಡ್ ಮಾಡ ಬಹುದು.
  ಎಕ್ಸಾಂ ಜುಲೈ-ಆಗಸ್ಟ್ ನಲ್ಲಿ 6 ಹಂತಗಳಲ್ಲಿ ನಡೆಸಲಾಯಿತು. ಭಾರತದ 259 ನಗರಗಳು ಮತ್ತು ಭಾರತದ ಹೊರಗಿನ 10 ನಗರಗಳ 489 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಒಟ್ಟು 14,90,000 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದಾರೆ.