   : ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು
ನವದೆಹಲಿ:ಬಹುಚರ್ಚಿತ ವಿಚಾರವಾಗಿರುವ ʻಒಂದು ರಾಷ್ಟ್ರ ಒಂದು ಚುನಾವಣೆʼ(   ) ಪ್ರಸ್ತಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ( ) ಅನುಮೋದನೆ ನೀಡಿರುವ ಬೆನ್ನಲ್ಲೇ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಇದೊಂದು ಅಪ್ರಯೋಗಿಕ ನೀತಿ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರೆ, ಈ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಲಾಭ ಆಗಲಿದೆ ಎಂದು ಎನ್‌ಡಿಎ ಮತ್ತು ಅದರ ಮಿತ್ರಪಕ್ಷಗಳ ನಾಯಕರು ಟಾಂಗ್‌ ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಪ್ರಸ್ತಾಪವು ಅಪ್ರಾಯೋಗಿಕ ಮತ್ತು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ನಾವು ಇದರೊಂದಿಗೆ ನಿಲ್ಲುವುದಿಲ್ಲ. ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಜಾಪ್ರಭುತ್ವ ಉಳಿಯಲು ಜನ ಬಯಸಿದಾಗ ಮತ್ತು ಅಗತ್ಯವಿರುವಾಗ ಚುನಾವಣೆಗಳು ನಡೆಯಬೇಕು ಎಂದು ಕೇಂದ್ರ ನಡೆಯನ್ನು ಟೀಕಿಸಿದ್ದಾರೆ.
"   ,          ,       … '   . ' ,  '     .               …../FfuLMBd8FV
ಅಶ್ವಿನಿ ವೈಷ್ಣವ್‌ ತಿರುಗೇಟು
ಇನ್ನು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿರುಗೇಟು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಮಹತ್ವದ ನಡೆಗೆ ಶೇ.80ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಪ್ರತಿಪಕ್ಷ ನಾಯಕರ ಮೇಲೆ  ಇದನ್ನು ವಿರೋಧಿಸುವ ಒತ್ತಡ ಇದೆ. ಹೀಗಾಗಿ ಈರೀತಿ ಹೇಳಿಕೆ ಕೊಟ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
"              80%       ,"          '   '   '  ""…../xds6QQkjJt
ಇನ್ನು ಈ ಒಂದು ದೇಶ ಒಂದು ಚುನಾವಣೆ ನೀತಿಗೆ ಅನೇಕ ವಿರೋಧ ಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಅಪ್ರಾಯೋಗಿಕ ನೀತಿ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ:   : ‘ಒಂದು ರಾಷ್ಟ್ರ, ಒಂದು ಚುನಾವಣೆ’ ವರದಿಗೆ ಕೇಂದ್ರದಿಂದ ಅಸ್ತು; ಶೀಘ್ರವೇ ಸಂಸತ್‌ನಲ್ಲಿ ಮಂಡನೆ