ಮಾನಸಿಕ ಆರೋಗ್ಯಕ್ಕೆ ಆದ್ಯತೆ: ಉದ್ಯೋಗಿಗಳಿಗೆ ವಿರಾಮ ಘೋಷಿಸಿದ ಮೀಶೋ
ನವದೆಹಲಿ:ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋ ತನ್ನ ಉದ್ಯೋಗಿ ಗಳಿಗೆ ವಿರಾಮ ಘೋಷಿಸಿದೆ.
ʻರೀಸೆಟ್ ಮತ್ತು ರೀಚಾರ್ಜ್ʼ ಎಂದು ಈ ಉಪಕ್ರಮವು ಉದ್ಯೋಗಿಗಳಿಗೆ ಕೆಲಸದಿಂದ ಸಂಪೂರ್ಣವಾಗಿ ಅನ್‌ಪ್ಲಗ್ ಮಾಡಲು ಮತ್ತು ಬಿಡುವಿಲ್ಲದ ಹಬ್ಬದ ಮಾರಾಟದ ಅವಧಿಯ ನಂತರ ಅವರ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಕಂಪನಿ ಅನುವು ಮಾಡಿಕೊಡುತ್ತದೆ ಎಂದು ಬಹಿರಂಗಪಡಿಸಿದೆ.
 ಸಂಸ್ಥಾಪಕ ಮತ್ತು ಸಿಟಿಒ ಸಂಜೀವ್ ಬರ್ನ್ವಾಲ್, ಸತತ ಎರಡನೇ ವರ್ಷಕ್ಕೆ 11 ದಿನ ಕಂಪನಿಯಾದ್ಯಂತ ವಿರಾಮ  ಘೋಷಿಸಿದ್ದೇವೆ!.
ಮುಂಬರುವ ಹಬ್ಬದ ಸೀಸನ್‌ ಮತ್ತು ಕೆಲಸ ಜೀವನದ ಸಮತೋಲನದ ಮಹತ್ವವನ್ನು ಗಮನದಲ್ಲಿಟ್ಟು ಕೊಂಡು ಕಂಪನಿ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಈ ವಿರಾಮ ಘೋಷಿಸಿದೆ ಎಂದು ತಿಳಿಸಿದ್ದಾರೆ.