ಡಾ.ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಮರುನಾಮಕರಣಕ್ಕೆ ಅಂಗೀಕಾರ
ಅಮರಾವತಿ:ಆಂಧ್ರ ಪ್ರದೇಶದಲ್ಲಿ ತೀವ್ರ ಟೀಕೆ ಮತ್ತು ಪ್ರತಿಭಟನೆಯ ನಡುವೆ ಡಾ.ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಅನ್ನು ಡಾ.ವೈಎಸ್‌ಆರ್‌ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವ‘ಡಾ.ಎನ್‌ಟಿ ಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಮಸೂದೆ, 2022 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ವಿಧಾನಸಭೆ ಅಂಗೀಕರಿಸಿದ ಕೂಡಲೇ ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಆರೋಗ್ಯ ವಿಶ್ವವಿದ್ಯಾಲಯಕ್ಕೆ ಎನ್ಟಿಆರ್ ಅವರ ಹೆಸರನ್ನು ಮುಂದುವರಿಸ ಬೇಕು ಎಂದು ಒತ್ತಾಯಿಸಿದರು.
ಆಂಧ್ರ ಪ್ರದೇಶದಲ್ಲಿ ಈ ಹಿಂದೆ ವೈ.ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಯಾವೊಬ್ಬ ಮುಖ್ಯಮಂತ್ರಿಯೂ ಎನ್‌ಟಿಆರ್‌ ಯುಎಚ್‌ಎಸ್ ಅನ್ನು ಮರುನಾಮಕರಣ ಮಾಡಲು ಪ್ರಯತ್ನಿಸಿರಲಿಲ್ಲ.
ದೇಶಾದ್ಯಂತ ಪ್ರಶಂಸೆ ಹೊಂದಿರುವ ಎನ್‌ಟಿಆರ್‌ಯು ಎಚ್‌ಎಸ್ ಸ್ಥಾಪನೆಯಾಗಿ 36 ವರ್ಷಗಳ ನಂತರ ಅದರ ಹೆಸರನ್ನು ಮರುನಾಮಕರ ಮಾಡುವುದು ತರ್ಕಬದ್ಧ ವಾಗಿಲ್ಲ,” ಎಂದು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ವೈದ್ಯಕೀಯ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಹೊಂದಬೇಕು ಎಂಬ ದೃಷ್ಟಿಯಿಂದ 1986 ರಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.