ಸಿಯುಇಟಿ ಪಿಜಿ 2022 ಪರೀಕ್ಷೆ ಫಲಿತಾಂಶ ನಾಳೆ ಬಿಡುಗಡೆ
ನವದೆಹಲಿ:ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಸ್ನಾತಕೋತ್ತರ (ಸಿಯುಇಟಿ ಪಿಜಿ 2022) ಪರೀಕ್ಷೆಯ ಫಲಿತಾಂಶ ವನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಯುಜಿಸಿ ಅಧ್ಯಕ್ಷ ಮಾಮಿಡಾಲ ಜಗದೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸೆ.26 ರಂದು ಸಂಜೆ ಸಿಯುಇಟಿ-ಪಿಜಿ ಫಲಿತಾಂಶಗಳನ್ನು ಪ್ರಕಟಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು’ ಎಂದು ಟ್ವಿಟ್‌ ಮಾಡಿದ್ದಾರೆ.
2022-2023 ರ ಶೈಕ್ಷಣಿಕ ವರ್ಷದಲ್ಲಿ, ಎನ್ಟಿಎ 66 ಕೇಂದ್ರೀಯ ಮತ್ತು ಭಾಗವಹಿಸುವ ವಿಶ್ವವಿದ್ಯಾಲಯಗಳಿಗೆ ಸಿಯುಇಟಿ ಪಿಜಿ 2022 ಪರೀಕ್ಷೆಯನ್ನು ನಡೆಸಿತು.